ಬೈಕ್- ಬಸ್ ಢಿಕ್ಕಿ ಹೊಡೆದು ಸಾರಣೆ ಕಾರ್ಮಿಕ ಮೃತ್ಯು

ಹೊಸದುರ್ಗ: ಅಂಬಲತ್ತರ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಇರಿಯದಲ್ಲಿ ಬಸ್- ಬೈಕ್ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟರು. ಮೂರನೇಮೈಲು ಪುದಂಗಾನಂ ವಟ್ಟಕ್ಕಯ ನಿವಾಸಿ ನಾರಾಯಣನ್‌ರ ಪುತ್ರ ರಾಘವನ್ (49) ಮೃತಪಟ್ಟವರು.

ನಿನ್ನೆ ರಾತ್ರಿ 8.30ರ ವೇಳೆ ಕಾಞಂಗಾಡ್- ಪಾಣತ್ತೂರು ರಾಜ್ಯ ಹೆದ್ದಾರಿಯ  ಇರಿಯ ಬಂಗ್ಲಾವ್ ಸಮೀಪದಲ್ಲಿ ಅಪಘಾತ ಸಂಭವಿಸಿದೆ. ರಾಘವನ್ ಸಂಚರಿಸಿದ್ದ ಬೈಕ್ ಹಾಗೂ ಖಾಸಗಿ ಬಸ್ ಢಿಕ್ಕಿ ಹೊಡೆದು ಅಪಘಾತವುಂಟಾಗಿದೆ. ಕೂಡಲೇ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ.  ಸಾರಣೆ ಕಾರ್ಮಿಕನಾಗಿದ್ದಾರೆ. ಕೆಲಸ ಮುಗಿಸಿ ಮನಗೆ ಹಿಂತಿರುಗುವ ಮಧ್ಯೆ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ಚಾಲಕನ ವಿರುದ್ಧ ಅಂಬಲತ್ತರ ಪೊಲೀಸರು ಕೇಸು ದಾಖಲಿಸಿದ್ದಾರೆ.

RELATED NEWS

You cannot copy contents of this page