ಹಿರಿಯ ಕೃಷಿಕ ನಿಧನ

ಮಂಜೇಶ್ವರ: ಪಾವೂರು ರೆಂಜ ಪಡ್ಪು ನಿವಾಸಿ ಹಿರಿಯ ಕೃಷಿಕ ಲಕ್ಷ್ಮಣ ಮೂಲ್ಯ (70) ಸ್ವ-ಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಲೀಲಾ, ಮಕ್ಕಳಾದ ದಿನೇಶ್, ಶಶಿಕಲಾ, ವಿನೋದ್ (ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ), ಸೊಸೆಯಂದಿರಾದ ವಸಂತಿ, ಕಮಲಾಕ್ಷಿ. ಕೆ (ಮಂಜೇಶ್ವರ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ), ಅಳಿಯ ನಾರಾಯಣ, ಸಹೋದರಿ ಯರಾದ ಲೀಲಾ, ಸುಶೀಲ, ಸಹೋದರ ಶ್ರೀಧರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿ ದ್ದಾರೆ. ಓರ್ವ ಸಹೋದರ ವಾಮನ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರ ಮನೆಗೆ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಸಹಿತ ವಿವಿಧ ರಾಜಕೀಯ ನೇತಾರರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

RELATED NEWS

You cannot copy contents of this page