ಗೂಡಂಗಡಿಗೆ ಕೆಲಸಕ್ಕೆಂದು ಹೋದ ಯುವತಿ ನಾಪತ್ತೆ 

ಕಾಸರಗೋಡು: ಏಳು ವರ್ಷದ ಪುತ್ರಿಯನ್ನು ಕರೆದುಕೊಂಡು ಗೂಡಂಗಡಿಗೆ ಕೆಲಸಕ್ಕೆಂದು ತೆರಳಿದ ಯುವತಿ ನಾಪತ್ತೆಯಾಗಿರುವುದಾಗಿ ದೂರಲಾಗಿದೆ.

ಬೇಕಲ ಬೀಚ್ ರಸ್ತೆಯ ರಮಣಿ ನಿಲಯ ನಿವಾಸಿ ಎಸ್. ಪ್ರದೀಪ್‌ರ ಪತ್ನಿ ಬೇಬಿ (40), ಏಳು ವರ್ಷದ ಪುತ್ರಿ ಎಂಬಿವರು ನಾಪತ್ತೆಯಾದವರು. ಆದಿತ್ಯವಾರ ಬೆಳಿಗ್ಗೆ ಬೇಬಿ ಪುತ್ರಿಯನ್ನು ಕರೆದುಕೊಂಡು ಮನೆಯಿಂದ ಹೊರಟಿದ್ದರೆನ್ನಲಾಗಿದೆ. ಸಂಜೆಯಾದರೂ ಹಿಂತಿರುಗಲಿಲ್ಲ. ಈ ಹಿನ್ನೆಲೆಯಲ್ಲಿ ಪತಿ ಬೇಕಲ ಪೊಲೀಸರಿಗೆ ದೂರು ನೀಡಿದ್ದಾರೆ. ಬೇಬಿ ತಳಿಪರಂಬ ನಿವಾಸಿಯಾದ ಬೈಜು ಎಂಬಾತನ ಜೊತೆ ತೆರಳಿ ರುವುದಾಗಿ ಶಂಕಿಸಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

RELATED NEWS

You cannot copy contents of this page