ಕಿಸಾನ್ ಸೇನೆ ನೇತಾರ ಶುಕೂರ್ ಕಾನಾಜೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ: ಡೆತ್ ನೋಟ್ ಪತ್ತೆ

ಕುಂಬಳೆ:  ಮಾಜಿ ಕಾಂಗ್ರೆಸ್ ಕಾರ್ಯಕರ್ತ, ಕಿಸಾನ್ ಸೇನೆಯ ರಾಜ್ಯ, ಜಿಲ್ಲಾ ನೇತಾರನಾದ ಶುಕೂರ್ ಕಾನಾಜೆ (55) ತರವಾಡು ಮನೆಯೊಳಗೆ ನೇಣುಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಎಂದಿನಂತೆ ನಿನ್ನೆ ಬಳಿಗ್ಗೆ ಪುತ್ತಿಗೆ ಕಟ್ಟತ್ತಡ್ಕದ ಮನೆಯಿಂದ ಕಾನಾಜೆಯಲ್ಲಿರುವ ತೋಟಕ್ಕೆ ತೆರಳಿದ್ದರು. ದೀರ್ಘ ಹೊತ್ತು ಕಳೆದರೂ ಅವರು ಮರಳಿ ಬಾರದ ಹಿನ್ನೆಲೆಯಲ್ಲಿ ಮನೆಯವರು ಅವರ ಫೋನ್‌ಗೆ ಕರೆಮಾಡಿದರೂ ಪ್ರತಿಕ್ರಿಯೆ ಲಭಿಸಿಲ್ಲ.  ಸಂಬಂಧಿಕರು, ನಾಗರಿಕರು ಹಾಗೂ ಸ್ನೇಹಿತರು ಕೂಡಾ ಫೋನ್ ಕರೆಮಾಡಿದರೂ ಕರೆ ಸ್ವೀಕರಿಸಲಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಿಕರು ಕಾನಾಜೆಯ ತೋಟ ಸಮೀಪದಲ್ಲಿರುವ ತರವಾಡು ಮನೆಗೆ ತೆರಳಿ ಹುಡುಕಾಡಿದಾಗ ಅಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶುಕೂರ್ ಪತ್ತೆಯಾಗಿದ್ದಾರೆ. ಕೂಡಲೇ ಅವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಇದೇ ವೇಳೆ ಶುಕೂರ್ ಕಾನಾಜೆ ಆತ್ಮಹತ್ಯೆಗೈಯ್ಯುವ ಮೊದಲು ಬರೆದಿಟ್ಟ ಪತ್ರವೊಂದು ಲಭಿಸಿದೆ. ಅದರಲ್ಲಿ ‘ತನ್ನ ಸಾವಿಗೆ ಯಾರೂ ಕಾರಣರಲ್ಲ.  ಹೃದಯ ಸಂಬಂಧ ಅಸೌಖ್ಯದಿಂದ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಮನ ನೊಂದು ನೇಣಿಗೆ ಶರಣಾಗುವುದಾಗಿ’ ಬರೆದಿರುತ್ತದೆ.

ಪತ್ರವನ್ನು  ಪೊಲೀಸರು ವಶಕ್ಕೆ  ತೆಗೆದುಕೊಂಡಿದ್ದಾರೆ.   ಕಳೆದ ಸ್ಥಳೀಯಾ ಡಳಿತ ಚುನಾವಣೆಯಲ್ಲಿ ಮಂಜೇಶ್ವರ ಬ್ಲೋಕ್ ಪಂಚಾಯತ್‌ಗೆ ಶುಕೂರ್ ಕಾನಾಜೆ ಸ್ಪರ್ಧಿಸಿದ್ದರೂ ಗೆಲುವು ಸಾಧಿಸಿರಲಿಲ್ಲ.

ಕೃಷಿಕರು ನಡೆಸಿದ ಹಲವು ಹೋ ರಾಟಗಳಿಗೆ  ನೇತೃತ್ವನೀಡಿದ್ದ ಶುಕೂರ್‌ರ ಅಕಾಲಿಕ ಅಗಲುವಿಕೆಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ  ಮರಣೋತ್ತರ ಪರೀಕ್ಷೆ ನಡೆಸಿದಬಳಿಕ ಇಂದು ಬೆಳಿಗ್ಗೆ  ಪುತ್ತಿಗೆ ಜುಮಾ ಮಸೀದಿ ಪರಿಸರದಲ್ಲಿ ಅಂತ್ಯಸಂಸ್ಸಾರ ನಡೆಸಲಾಯಿತು. ಈ ವೇಳೆ ಸಂಬಂಧಿಕರು,ಸ್ನೇಹಿತರ ಸಹಿತ ಅಪಾರ ಸಂಖ್ಯೆಯಲ್ಲಿ ಜನರು ಅಲ್ಲಿಗೆ ತಲುಪಿದ್ದರು. ಮೃತರು ಪತ್ನಿ ಸಸ್ಮ, ಮಕ್ಕಳಾದ  ಫಾತಿಮತ್ ಸುಸ, ಸಸ, ಸಿಸಾನ್, ಸಹೋದರ-ಸಹೋದರಿಯರಾದ ಅಲಿ, ಅಸೀಸ್, ನಸೀಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವೆ ಸಹೋದರಿ ಉಮ್ಮಾಲಿ ಈ ಹಿಂದೆ ನಿಧನರಾಗಿದ್ದಾರೆ.

RELATED NEWS

You cannot copy contents of this page