ಮರದಡಿಯಲ್ಲಿ ನಿದ್ರಿಸುತ್ತಿದ್ದ ಯುವಕ ಕಾಡಾನೆ ಆಕ್ರಮಣದಿಂದ ಮೃತ್ಯು

ಪಾಲಕ್ಕಾಡ್: ಮರದಡಿಯಲ್ಲಿ ನಿದ್ರಿಸುತ್ತಿದ್ದ ಯುವಕ ಕಾಡಾನೆಯ ಆಕ್ರಮಣದಿಂದ ಮೃತಪಟ್ಟರು. ಪಾಲಕ್ಕಾಡ್ ಮಲಂಬುಳ ಅಗಮಲವಾರಂ ಬುಡಕಟ್ಟು ಉನ್ನತಿಯಲ್ಲಿ ನಿನ್ನೆ ಮುಂಜಾನೆ ಘಟನೆ ನಡೆದಿದ್ದು, ಇಲ್ಲಿನ ಚಂದ್ರನ್ (45) ಮೃತಪಟ್ಟಿದ್ದಾರೆ. ಇವರ ಜೊತೆಯಲ್ಲಿ ಮಲಗಿದ್ದ ಇನ್ನಿಬ್ಬರು ಓಡಿ ಹೋದ ಕಾರಣ ಪಾರಾದರು. ಅಸಹನೀಯ ಬಿಸಿಯ ಹಿನ್ನೆಲೆಯಲ್ಲಿ ಮನೆಯ ಹೊರಗೆ ಹುಳಿಮರದಡಿಯಲ್ಲಿ ಇವರು ಮಲಗಿ ನಿದ್ರಿಸಿದ್ದರು. ಈ ಮಧ್ಯೆ ಕಾಡಾನೆ ಆಕ್ರಮಿಸಿದೆ.

ಕಾಡಾನೆ ಬರುತ್ತಿರುವುದನ್ನು ಗಮನಿಸಿದ ಇನ್ನಿಬ್ಬರು ಓಡಿ ಪಾರಾದರಾದರೂ ಚಂದ್ರನ್‌ರಿಗೆ ಆ ಸಮಯದಲ್ಲಿ ಅಲ್ಲಿಂದ ಪಾರಾಗಲು ಸಾಧ್ಯವಾಗಲಿಲ್ಲ. ಹತ್ತಿರ ತಲುಪಿದ ಕಾಡಾನೆ ಮೆಟ್ಟಿದ್ದು ಚಂದ್ರನ್ ಅಲ್ಲೇ ಮೃತಪಟ್ಟಿದ್ದಾರೆ. ಮಲಂಬುಳ ಸರಕಾರಿ ಆಸ್ಪತ್ರೆಯಲ್ಲಿ ಈ ಮೊದಲು ತಾತ್ಕಾಲಿಕ ನೌಕರನಾಗಿ ಇವರು ಕರ್ತವ್ಯದಲ್ಲಿದ್ದರು. ಕಾಡಾನೆಗಳ ಉಪಟಳ ಈ ಪರಿಸರದಲ್ಲಿ ಕಡಿಮೆಯಾಗಿದ್ದು ಈ ಹಿನ್ನೆಲೆಯಲ್ಲಿ ಜನರು ಹೊರಗೆ ಮಲಗುವುದು ಸಾಮಾನ್ಯವಾಗಿದೆ.

RELATED NEWS

You cannot copy contents of this page