ತಿರುವನಂತಪುರ: ಎಸ್ಎಸ್ ಎಲ್ಸಿ ಪರೀಕ್ಷಾ ಫಲಿತಾಂಶವನ್ನು ನಾಳೆ ಅಪರಾಹ್ನ 3 ಗಂಟೆಗೆ ಪ್ರಕಟಿಸಲಾಗುವುದು. ಏಕೀಕೃತ ಸೇವಾ ಪ್ಲಾಟ್ಫಾಂ ಆಗಿರುವ ‘ನಮ್ಮಡೆ ಕೇರಳಂ’ ಎಂಬ ಆಪ್ನಲ್ಲ್ಲೂ ಫಲಿತಾಂಶ ಲಭಿಸಲಿದೆ. ಇದರ ಹೊರತಾಗಿ www.results. kite.kerala.gov.in ಎಂಬ ಕ್ಲೌಡ್ ಆಧಾರಿತ ಪೋರ್ಟಲ್ ಮತ್ತು Saphalam KITE ಎಂಬ ಮೊಬೈಲ್ ಆಪ್ನಲ್ಲಿ ಫಲಿತಾಂಶ ಲಭಿಸಲಿದೆ.
ಸಾಧಾರಣವಾಗಿ ಶಿಕ್ಷಣ ಸಚಿವರೇ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಿಸುತ್ತಿದ್ದು ಆದರೆ ಈ ಬಾರಿ ಹೊಸ ಸರಕಾರ ಇನ್ನೂ ಅಸ್ತಿತ್ವಕ್ಕೆ ಬಾರದಿರುವುದರಿಂದ ಪರೀಕ್ಷಾ ಫಲಿತಾಂಶ ಪ್ರಕಟಗೊ ಳ್ಳುವಲ್ಲಿ ವಿಳಂಬ ಉಂಟಾಗಿರುವುದರ ಪ್ರಧಾನ ಕಾರಣವಾಗಿದೆ. ಇದರಿಂದಾಗಿ ಹೊಸ ಸರಕಾರ ರಚನೆಯಾಗುವ ತನಕ ಕಾದುನಿಲ್ಲದೆ ನಾಳೆಯೇ ಫಲಿತಾಂಶ ಪ್ರಕಟಿಸುವ ತೀರ್ಮಾನವನ್ನು ಶಿಕ್ಷಣ ಇಲಾಖೆ ಕೈಗೊಂಡಿದೆ.







