ಪೂಚಕ್ಕಾಡ್‌ನಲ್ಲಿ ರೈಲಿಗೆ ಕಲ್ಲೆಸೆತ: ಮಹಿಳೆಗೆ ಗಾಯ

ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪಳ್ಳಿಕೆರೆ ಪೂಚಕ್ಕಾಡ್ ನಲ್ಲಿ ರೈಲಿಗೆ ಕಲ್ಲೆಸೆತ ಉಂಟಾಗಿದೆ. ಜನರಲ್ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಗಾಯವುಂಟಾಗಿದೆ. ಕಣ್ಣಿಗೆ ಗಾಯಗೊಂಡ ನೀಲೇಶ್ವರ ಆಲಿಂಗೀಳ್ ನಿವಾಸಿ ಪಿ.ವಿ. ಕುಂಞಿಕೃಷ್ಣನ್‌ರ ಪತ್ನಿ ಅನಿತ (58)ರನ್ನು ಕಾಞಂಗಾಡ್ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಮಧ್ಯಾಹ್ನ ಕೊಯಂಬತ್ತೂರ್‌ಗೆ ತೆರಳುತ್ತಿದ್ದ ಇಂಟರ್‌ಸಿಟಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ಗೆ ಕಲ್ಲೆಸೆತ ಉಂಟಾಗಿದೆ. ಮಹಿಳೆ ಮಂಗಳೂರಿ ನಿಂದ ನೀಲೇಶ್ವರಕ್ಕೆ ಪ್ರಯಾಣಿಸುತ್ತಿದ್ದರು. ಇವರ ಬಲಕಣ್ಣಿಗೆ ಕಲ್ಲೆಸೆತದಿಂದ ಗಾಯವುಂಟಾಗಿದೆ. ಘಟನೆಯಲ್ಲಿ ಕಾಸರಗೋಡು ರೈಲ್ವೇ ಪೊಲೀಸರು ಕೇಸು ದಾಖಲಿಸಿದ್ದಾರೆ.

ಅಕ್ರಮಿಯೆಂದು ಶಂಕಿಸುವ ಓರ್ವನ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಇದನ್ನು ಕೇಂದ್ರೀಕರಿಸಿ ಆರೋಪಿಯ ಪತ್ತೆಗೆ ಶ್ರಮ ಆರಂಭಿಸಲಾಗಿದೆ.

You cannot copy contents of this page