ಯುವಕನೊಂದಿಗೆ ನಿಂತಿರುವ ಫೋಟೋ ಪತಿಗೆ ರವಾನೆ, ಸೋಶ್ಯಲ್ ಮೀಡಿಯಾ ಮೂಲಕ ಪ್ರಚಾರ ಆರೋಪ: ಯುವತಿ ದೂರಿನಂತೆ ಯುವಕನ ವಿರುದ್ಧ ಕೇಸು

ಮಂಜೇಶ್ವರ: ಯುವಕನೊಂದಿಗೆ ನಿಂತಿರುವ ಫೋಟೋವನ್ನು ಪತಿಯ ಫೇಸ್ ಬುಕ್ ಖಾತೆ ಹಾಗೂ ಇನ್‌ಸ್ಟಾಗ್ರಾಂಗೆ ಕಳುಹಿಸಿಕೊಟ್ಟು, ಪತಿ ಹಾಗೂ ಮಗುವನ್ನು ಕೊಲ್ಲುವುದಾಗಿ ಫೋನ್ ಮೂಲಕ ಬೆದರಿಕೆಯೊಡ್ಡಿದ ಬಗ್ಗೆ ದೂರಲಾಗಿದೆ.  ಮಂಜೇಶ್ವರ ಪಾವೂರಿನ 37ರ ಹರೆಯದ ಯುವತಿ ನೀಡಿದ ದೂರಿನಂತೆ ಕುಂಜತ್ತೂರಿನ ಇಬ್ರಾಹಿಂ ಖಲೀಲ್ (32) ಎಂಬಾತನ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಮೇ 29ರಂದು ಮಧ್ಯಾಹ್ನ 12 ಗಂಟೆ ಹಾಗೂ 30ರಂದು ಬೆಳಿಗ್ಗೆ 10.44ರ ಮಧ್ಯೆ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ದೂರುಗಾರ್ತಿ ಹಾಗೂ ಇಬ್ರಾಹಿಂ ಖಲೀಲ್ ಜೊತೆಯಾಗಿ ನಿಂತಿರುವ ಫೋಟೋವನ್ನು ಯುವತಿಯ ಪತಿಗೆ ಕಳುಹಿಸಿಕೊಟ್ಟು ಬಳಿಕ ಸೋಶ್ಯಲ್ ಮೀಡಿಯಾ ಮೂಲಕ ಕೆಟ್ಟ ರೀತಿಯಲ್ಲಿ ಪ್ರಚಾರಗೈದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

RELATED NEWS

You cannot copy contents of this page