ಪೆರ್ಮುದೆ- ಪೆರ್ಲ ರಸ್ತೆಯ ತಿರುವುಗಳಲ್ಲಿ ಕಾಡುಪೊದೆ ಬೆಳೆದು ವಾಹನ ಸವಾರರಿಗೆ ಆತಂಕ

ಉಪ್ಪಳ: ಪೆರ್ಮುದೆಯಿಂದ ಪೆರ್ಲಕ್ಕೆ ಸಂಚರಿಸುವ ದಾರಿ ಮಧ್ಯೆ ಹಲವು ತಿರುವುಗಳಲ್ಲಿ ಬೆಳೆದು ನಿಂತಿರುವ ಕಾಡುಪೊದೆಗÀಳು ವಾಹನ ಸವಾರರಲ್ಲಿ ಆತಂಕ ಉಂಟು ಮಾಡಿದೆ. ಅಂಗಡಿ ಮೊಗರು, ಬಾಡೂರು ಸಹಿತ ಹಲವಾರು ತಿರುವುಗಳು ಈ ರಸ್ತೆಯಲ್ಲಿ ಕಂಡು ಬರುತ್ತಿದ್ದು, ಇಕ್ಕೆಡೆಗಳಲ್ಲಿ ಕಾಡುಪೊದೆಗಳು ಬೆಳೆದು ಎದುರು ಭಾಗದಿಂದ ಬರುವ ವಾಹನಗಳು ಗಮನಕ್ಕೆ ಬಾರದೆ ಅಪಘಾತಕ್ಕೆ ಆಹ್ವಾ ನೀಡಿದಂತಾಗುತ್ತಿದೆ ಎಂದು ದೂರಲಾ ಗಿದೆ. ಅಚ್ಚು ಕಟ್ಟಾಗಿ ವ್ಯವಸ್ಥಿತ ವಾಗಿರುವ ಲೋಕೋಪಯೋಗಿ ಇಲಾಖೆಯ ಈ ರಸ್ತೆಯಲ್ಲಿ ವಾಹನ ಗಳು ವೇಗದಿಂದ ಸಂಚರಿಸುವಾಗ ತಿರುವುನಲ್ಲಿ ದ್ವಿಚಕ್ರ ಸಹಿತ ಇತರ ವಾಹನ ಸವಾರರಿಗೆ ಆತಂಕ ಉಂಟು ಮಾಡಿದೆ. ತಿರುವಿನ ಕಾಡು ಪೊದೆ ಗಳನ್ನು ಕಡಿದು ಶುಚೀಕರಣ ಗೊಳಿ ಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

You cannot copy contents of this page