ಅನಂತಪುರ ಉದ್ದಿಮೆ ಪಾರ್ಕ್‌ನ ದುರ್ನಾತ ಪರಿಹಾರಕ್ಕೆ ಒತ್ತಾಯ: 8ರಂದು ಕ್ರಿಯಾ ಸಮಿತಿಯಿಂದ ಮಾರ್ಚ್, ಧರಣಿ

ಕುಂಬಳೆ: ಅನಂತಪುರ ಉದ್ದಿಮೆಪಾರ್ಕ್‌ನ ಫ್ಯಾಕ್ಟರಿಗಳಿಂದ ಹೊರಸೂಸುವ ದುರ್ನಾತಕ್ಕೆ ಪರಿಹಾರ ಕಾಣಲು ಸಂಬಂಧಪಟ್ಟ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು, ಜನರ ಜೀವ ಹಾಗೂ ಸೊತ್ತಿಗೆ ಬೆದರಿಕೆ ಯಾಗುವ ಕೈಗಾರಿಕೆಗಳನ್ನು ಮುಚ್ಚುಗಡೆಗೊಳಿಸಬೇಕೆಂದು ಕ್ರಿಯಾ ಸಮಿತಿ ಪದಾಧಿಕಾರಿಗಳು ಕುಂಬಳೆ ಪ್ರೆಸ್ ಫಾರಂನಲ್ಲಿ ಕರೆದ ಪತ್ರಿಕಾಗೋ ಷ್ಠಿಯಲ್ಲಿ ಒತ್ತಾಯಿಸಿದ್ದಾರೆ.  ಚರಂಡಿ ಇಲ್ಲದಿರುವುದರಿಂದ ಮಲಿನ ಜಲ ಹರಿದು ಕುಡಿಯುವ ನೀರು ಮೂಲ ಗಳಿಗೆ ತಲುಪಿ ಶುದ್ಧ ನೀರು ಕಲುಷಿ ತಗೊಳ್ಳುತ್ತಿದೆಯೆಂದು ಪದಾಧಿಕಾರಿಗಳು ಆರೋಪಿಸಿದ್ದಾರೆ. ನೂತನವಾಗಿ ಆರಂಭಿಸಲಿರುವ ಕೈಗಾರಿಕೆಗಳಿಗೆ ಅನುಮತಿ ನೀಡ ಕೂಡದು.  ಕೈಗಾರಿಕೆ ಹೆಸರಲ್ಲಿ ಈ ಪ್ರದೇಶದಿಂದ ಇತರ ರಾಜ್ಯಗಳಿಗೆ ಮಣ್ಣು ಸಾಗಾಟವಾಗುತ್ತಿರು ವುದನ್ನು ತಡೆಯಬೇಕೆಂದೂ ಪದಾಧಿ ಕಾರಿಗಳು ಒತ್ತಾಯಿಸಿದ್ದಾರೆ. ಈ ಬೇಡಿಕೆಗಳನ್ನು ಮುಂದಿರಿಸಿಕೊಂಡು ಜೂನ್ 8ರಂದು ಉದ್ದಿಮೆ ಪಾರ್ಕ್‌ಗೆ ಮಾರ್ಚ್ ಹಾಗೂ ಧರಣಿ ನಡೆಸು ವುದಾಗಿ ಪದಾಧಿಕಾರಿಗಳು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಚೆಯರ್‌ಮೆನ್ ಶರೀಫ್, ಕನ್ವೀನರ್ ಸುನಿಲ್ ಕುಮಾರ್, ವೈಸ್‌ಚೆಯರ್‌ಮೆನ್ ಎ.ಕೆ. ಆಶ್ರಫ್, ನಾಸರ್ ಕೆ.ಎಂ., ಜನಾರ್ದನ ಪೂಜಾರಿ ಭಾಗವಹಿಸಿದರು.

You cannot copy contents of this page