ದುರ್ನಾತ: ಅನಂತಪುರ ಉದ್ದಿಮೆ ಪಾರ್ಕ್‌ಗೆ ಕ್ರಿಯಾ ಸಮಿತಿಯಿಂದ ಮಾರ್ಚ್

ಕುಂಬಳೆ: ಅನಂತಪುರ ಉದ್ದಿಮೆ ಪಾರ್ಕ್‌ನ  ಫ್ಯಾಕ್ಟರಿಗಳಿಂದ ಹೊರ ಸೂಸುವ ದುರ್ನಾತಕ್ಕೆ ಪರಿಹಾರ ಕಾಣಲು  ತುರ್ತು ಕ್ರಮ ಕೈಗೊಳ್ಳಬೇಕು, ಜನರ ಜೀವ ಹಾಗೂ ಸೊತ್ತಿಗೆ ಬೆದರಿಕೆಯಾಗುವ ಕೈಗಾರಿ ಕೆಗಳನ್ನು ಮುಚ್ಚುಗಡೆಗೊಳಿಸ ಬೇಕೆಂದು ಒತ್ತಾಯಿಸಿ ಇಂದು ಬೆಳಿಗ್ಗೆ ಕ್ರಿಯಾ ಸಮಿತಿ ನೇತೃತ್ವದಲ್ಲಿ ಅನಂತಪುರ ಉದ್ದಿಮೆ ಪಾರ್ಕ್‌ಗೆ ಮಾರ್ಚ್ ನಡೆಸಲಾಯಿತು. ನೂರಾರು ಮಂದಿ ಭಾಗವಹಿಸಿದ ಮಾರ್ಚ್ ನಾಯ್ಕಾಪಿ ನಿಂದ ಆರಂಭಗೊಂಡಿತು. ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಮಾರ್ಚ್ ಉದ್ಘಾಟಿಸಿದರು. ಕ್ರಿಯಾ ಸಮಿತಿ ಚೆಯರ್‌ಮೆನ್ ಶೆರೀಫ್ ಟಿ, ಕನ್ವೀನರ್ ಸುನಿಲ್ ಅನಂತಪುರ, ವೈಸ್ ಚೆಯರ್‌ಮೆನ್ ಎ.ಕೆ. ಅಶ್ರಫ್, ಜಿಲ್ಲಾ ಪಂಚಾಯತ್ ಸದಸ್ಯ ಸೋಮಶೇಖರ ಜೆ.ಎಸ್, ಪುತ್ತಿಗೆ ಪಂಚಾಯತ್ ಅಧ್ಯಕ್ಷೆ ಫಿದಾ, ಉಪಾಧ್ಯಕ್ಷ ಇ.ಕೆ. ಮೊಹಮ್ಮದ್ ಕುಂಞಿ, ಕುಂಬಳೆ ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಎ.ಕೆ. ಆರಿಫ್, ಬ್ಲೋಕ್ ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಳೆ ಮೊದಲಾದವರು ನೇತೃತ್ವ ನೀಡಿದರು. ಮಾರ್ಚ್‌ಗೆ  ಉದ್ದಿಮೆ ಪಾರ್ಕ್ ಬಳಿ ಪೊಲೀಸರು ತಡೆಯೊಡ್ಡಿದರು.

You cannot copy contents of this page