ರಾಜಕೀಯ ಯುವಜನ ಸಂಘಟನೆಗಳ ಪ್ರತಿಭಟನೆ: ಕಾಸರಗೋಡು ಮೆಡಿಕಲ್ ಕಾಲೇಜು ಆಸ್ಪತ್ರೆಯಿಂದ ಒ.ಪಿ ಸೇವೆ ಸ್ಥಳಾಂತರ ಕ್ರಮ ರದ್ದು

ಕಾಸರಗೋಡು: ಉಕ್ಕಿನಡ್ಕದಲ್ಲಿರುವ ಕಾಸರಗೋಡು ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಒ.ಪಿ ಸೇವೆಯನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಬದಲಾಯಿಸಲಿರುವ ಬಗ್ಗೆ ತಿಳಿಸಿ ಹೊರ ಡಿಸಿದ ನೋಟೀಸನ್ನು ಪ್ರಾಂಶುಪಾಲರು ಹಿಂತೆಗೆದುಕೊಂಡಿ ದ್ದಾರೆ. ಒ.ಪಿ ಸೇವೆ ನಿಲ್ಲಿಸುವುದರ ವಿರುದ್ಧ ಡಿವೈಎಫ್‌ಐ, ಯೂತ್ ಕಾಂಗ್ರೆಸ್, ಯೂತ್ ಲೀಗ್ ಸಂಘಟನೆಗಳು ಹಾಗೂ ನಾಗರಿಕರು ಪ್ರಾಂಶುಪಾಲರ ಕಚೇರಿ ಕೊಠಡಿಯೊ ಳಗೆ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಒ.ಪಿ ವಿಭಾಗವನ್ನು ಇಲ್ಲಿಂದ ಬೇರೆಡೆ ಸ್ಥಳಾಂತರಿಸುವುದಿಲ್ಲ ವೆಂದು  ಪ್ರಾಂಶುಪಾಲರು ಲಿಖಿತವಾಗಿ ತಿಳಿಸಿರುವುದಾಗಿ ಚಳವಳಿ ನಿರತರು ತಿಳಿಸಿದ್ದಾರೆ. ಎಂಬಿಬಿಎಸ್ ದ್ವಿತೀಯ ಬ್ಯಾಚ್‌ಗೆ ಕಾಲೇಜು ಕಟ್ಟಡದಲ್ಲಿ ಸೌಕರ್ಯ ಒದಗಿಸಲು ಈ ಕ್ರಮ ಕೈಗೊಂಡಿರುವುದಾಗಿಯೂ ಈ ಬಗ್ಗೆ ಸಚಿವರಿಗೆ ಹಾಗೂ ಜಿಲ್ಲೆಯ ಶಾಸಕರಿಗೆ ತಿಳಿಸಲಾಗಿತ್ತೆಂದು ಅಧಿಕಾರಿಗಳು ಸೂಚಿಸಿದ್ದಾರೆ.

RELATED NEWS

You cannot copy contents of this page