ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದಲ್ಲಿ ಮಹಾರುದ್ರಯಾಗ, ದೃಢಕಲಶ

ಬದಿಯಡ್ಕ: ಪೆರಡಾಲ ಶ್ರೀ ಉದ ನೇಶ್ವರ ದೇವಸ್ಥಾನದ ಬ್ರಹ್ಮಕಲ ಶೋತ್ಸವ ಇತ್ತೀಚೆಗೆ ಜರಗಿದ್ದು, ದೃಢಕಲಶ ನಿನ್ನೆ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಇವರ ನೇತೃತ್ವದಲ್ಲಿ ಜರಗಿತು. ಸೋಮವಾರ ಸಂಜೆ ಪುಣ್ಯಾಹವಾಚನ, ಪ್ರಾಸಾದ ಶುದ್ಧಿ, ರಾಕ್ಷೆÆÃಘ್ನ ಹೋಮ, ವಾಸ್ತು ಹೋಮ, ವಾಸ್ತುಬಲಿ, ವಾಸ್ತು ಪುಣ್ಯಾ ಹಾಂತ ನಡೆಯಿತು. ನಿನ್ನೆ ಪ್ರಾತಃಕಾಲ ಗಣಪತಿ ಹವನ, ಕಲಶಪೂಜೆ, ಕಲಶಾಭಿಷೇಕ, ಮಹಾಪೂಜೆ, ಶ್ರೀ ಮಹಾರುದ್ರಯಾಗ ನಡೆಯಿತು.
ಶ್ರೀಮದೆಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತಿ ಪ್ರಾರ್ಥನೆ ಮಾಡಿದರು. ಕ್ಷೇತ್ರದ ಅರ್ಚಕ ಶಿವರಾಮ ಭಟ್, ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರು, , ಕ್ಷೇತ್ರದ ಮೊಕ್ತೇಸರ ಜಗನ್ನಾಥ ರೈ ಪೆರಡಾಲಗುತ್ತು, ಪ್ರಧಾನ ಕಾರ್ಯದರ್ಶಿ ನಿರಂಜನ್ ರೈ ಪೆರಡಾಲ, ಜಯದೇವ ಖಂಡಿಗೆ, ಚಂದ್ರಹಾಸ ರೈ ಪೆರಡಾಲಗುತ್ತು, ಭಾಸ್ಕರ ಪಂಜಿತ್ತಡ್ಕ, ಸೀತಾರಾಮ ಭಾಗವಹಿಸಿದರು. ಆಡಳಿತ ಮಂಡಳಿ, ಸೇವಾಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ವಿವಿಧ ಉಪಸಮಿತಿಗಳ ನೇತೃತ್ವದಲ್ಲಿ ಕಾರ್ಯಕ್ರಮ ಸಂಪನ್ನವಾಯಿತು.

You cannot copy contents of this page