ವಾಮಾಚಾರದ ಭಾಗವೆಂದು ತಿಳಿಸಿ ಪೂಜೆ ಮಧ್ಯೆ ಬಾಲಕಿಗೆ ಲೈಂಗಿಕ ಉಪಟಳ: ಬಿಜೆಪಿ ಮುಖಂಡ, ಅರ್ಚಕ ಪೋಕ್ಸೋ ಪ್ರಕಾರ ಸೆರೆ

ಕೊಲ್ಲಂ: ವಾಮಾಚಾರದ ಮರೆಯಲ್ಲಿ 15ರ ಹರೆಯದ ಬಾಲಕಿಯನ್ನು ದೌರ್ಜನ್ಯಗೈಯ್ಯಲು ಯತ್ನಿಸಿದ ಪ್ರಕರಣದಲ್ಲಿ ಬಿಜೆಪಿ ಸ್ಥಳೀಯ ಮುಖಂಡನಾದ ಅರ್ಚಕ ಸೆರೆಯಾಗಿದ್ದಾನೆ. ಕೊಲ್ಲಂ ಈಸ್ಟ್ ಜಿಲ್ಲಾ ಸಮಿತಿ ಸದಸ್ಯ ಬಿಜು (50) ಸೆರೆಯಾದ ವ್ಯಕ್ತಿ. ಅಡೂರು ನೆಲ್ಲುಮುಳ್ ನಿವಾಸಿಯಾದ 15ರ ಹರೆಯದ ಬಾಲಕಿಯನ್ನು ಈತ ದೌರ್ಜನ್ಯಗೈಯ್ಯಲು ಯತ್ನಿಸಿದ್ದ. ಬಾಲಕಿಯ ಮನೆಯಲ್ಲಿ ಪೂಜೆಗೆ ಬಿಜು ತಲುಪಿದ್ದನು.

ಮನೆಯೊಳಗೆ ಪೂಜೆಗೆ ಬೇಕಾದ ಸಿದ್ಧತೆಗಳನ್ನು ನಡೆಸಿದ ಬಳಿಕ ಹೆತ್ತವರನ್ನು ಕೊಠಡಿಯಿಂದ ಹೊರಗೆ ಕಳುಹಿಸಿ ಬಾಗಿಲು ಮುಚ್ಚಿದನು. ಬಳಿಕ ವಾಮಾಚಾರದ ಭಾಗವೆಂದು ತಿಳಿಸಿ ಬಾಲಕಿಗೆ ಉಪಟಳ ನೀಡಲು ಯತ್ನಿಸಿದನು. ಹೆದರಿಕೆಯಿಂದ ಕಂಗಾಲಾಗಿದ್ದ ಬಾಲಕಿ ಮರುದಿನ ಈ ವಿಷಯವನ್ನು ಮನೆಯವರಲ್ಲಿ ತಿಳಿಸಿದ್ದಾಳೆ. ಆ ಬಳಿಕ ಹೆತ್ತವರು ಠಾಣೆಗೆ ತಲುಪಿ ದೂರು ನೀಡಿದ್ದು, ಅದರ ಬೆನ್ನಲ್ಲೇ ಆರೋಪಿಯನ್ನು ಸೆರೆ ಹಿಡಿಯ ಲಾಗಿದೆ. ಇದೇ ರೀತಿಯ ಘಟನೆಗಳು ಆರೋಪಿಯಿಂದ ಈ ಮೊದಲು ಉಂಟಾಗಿದೆಯೇ ಎಂಬ ಬಗ್ಗೆಯೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

You cannot copy contents of this page