ಮುಳ್ಳೇರಿಯ: ಅಡೂರು ಪಾಂಡಿಯಲ್ಲಿ ಪ್ಲಸ್‌ಟು ವಿದ್ಯಾರ್ಥಿ ನೇಣು ಬಿಗಿದು ಸಾವಿಗೀಡಾದ ಘಟನೆ ಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಪಾಂಡಿ ಬಳಿಯ ಬೆಳ್ಳಚ್ಚೇರಿ ನಿವಾಸಿ ಶಶಿ ಎಂಬವರ ಪುತ್ರ ಗೋಕುಲ್ (17) ಮೃತಪಟ್ಟ ಬಾಲಕನಾಗಿದ್ದಾನೆ. ಈತ ಪಾಂಡಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್‌ಟು ವಿದ್ಯಾರ್ಥಿಯಾಗಿದ್ದಾನೆ. ಮೊನ್ನೆ ರಾತ್ರಿ 10.30ರ ವೇಳೆ ಗೋಕುಲ್ ಮನೆಯ ಬೆಡ್‌ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಕೂಡಲೇ ಆತನನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಘಟನೆ ವೇಳೆ ತಾಯಿ ಧನ್ಯ ಹಾಗೂ ಗೋಕುಲ್ ಮಾತ್ರವೇ ಮನೆಯಲ್ಲಿದ್ದರು. ಬಾಲಕನ ಸಹೋದರಿ ಗೋಪಿಕ ಮಂಗಳೂರಿನಲ್ಲಿ ವಿದ್ಯಾರ್ಥಿನಿಯಾ ಗಿದ್ದಾಳೆ. ಜ್ವರ ಬಾಧಿಸಿದುದರಿಂದ ಗೋಕುಲ್ ಮೊನ್ನೆ ಶಾಲೆಗೆ ಹೋಗಿರಲಿಲ್ಲವೆನ್ನಲಾಗಿದೆ. ಈ ಬಗ್ಗೆ ತಿಳಿಸಿ ಸ್ನೇಹಿತನಿಗೆ ಗೋಕುಲ್ ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಿದ್ದನೆನ್ನಲಾಗಿದೆ.





