ವಾಟ್ಸಾಪ್‌ನಲ್ಲಿ  ಸಚಿವರನ್ನು ನಿಂದಿಸಿ ಸಂದೇಶ ರವಾನೆ: ಎಸ್‌ಪಿಗೆ ಅಶ್ರಫ್ ಕಾರ್ಳೆ ದೂರು

ಕಾಸರಗೋಡು: ಸ್ಥಳೀಯಾಡಳಿತ ಖಾತೆ ಸಚಿವ ಕೆ.ಎಂ. ಶಾಜಿ ಅವರನ್ನು ನಿಂದಿಸಿ ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕಾಸರಗೋಡು ಬ್ಲೋಕ್ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

‘ಕುಂಬಳೆ-ಅಳಿಮತಿ ವಿರುದ್ಧ’ ಎಂಬ ವಾಟ್ಸಾಪ್  ಗ್ರೂಪ್ ವೊಂದರಲ್ಲಿ ಪ್ರತ್ಯೇಕ ಪ್ರೊಫೈಲ್‌ನಿಂದ ಸಚಿವರನ್ನು ಅವಮಾನಗೈಯ್ಯುವ ರೀತಿಯಲ್ಲಿ ಅವಾಚ್ಯವಾಗಿ ನಿಂದಿಸಿ ಶಬ್ದ ಸಂದೇಶ ಕಳುಹಿಸಲಾಗಿದೆಯೆಂದು ದೂರ ಲಾಗಿದೆ. ಈ ಸಂಬಂಧ ಸ್ಕ್ರೀನ್ ಶಾಟ್‌ಗಳು ಹಾಗೂ ವಾಯ್ಸ್ ಕ್ಲಿಪ್ ಸಹಿತ ಪುರಾವೆಗಳನ್ನು ತನಿಖಾಧಿ ಕಾರಿಗಳಿಗೆ ಸಲ್ಲಿಸುವುದಾಗಿ ಅಶ್ರಫ್ ಕಾರ್ಳೆ ತಿಳಿಸಿದ್ದಾರೆ. ಬ್ಲೋಕ್ ಪಂ. ಸದಸ್ಯ ಸಿ.ವಿ. ಜೇಮ್ಸ್, ಸಾಮಾಜಿಕ ಕಾರ್ಯಕರ್ತ ಕೆ.ವಿ.ಯೂಸಫ್ ಎಂಬಿವರು ದೂರು ಸಲ್ಲಿಸಿದ ನಿಯೋಗದಲ್ಲಿದ್ದರು.

RELATED NEWS

You cannot copy contents of this page