ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿ ಬಸ್ ನಿಲ್ದಾಣಕ್ಕೆ ನುಗ್ಗಿ ವಿದ್ಯಾರ್ಥಿ ಸಹಿತ 3 ಮಂದಿ ಮೃತ್ಯು

ಕೊಲ್ಲಂ: ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿ ಬಸ್ ನಿಲ್ದಾಣಕ್ಕೆ ನುಗ್ಗಿ ವಿದ್ಯಾರ್ಥಿ ಸಹಿತ ಮೂರು ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಗಾಯಗೊಂಡ ಐದು ಮಂದಿಯನ್ನು  ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವೆನ್ನಲಾಗಿದೆ. ಟಿಪ್ಪರ್ ಲಾರಿ ಚಾಲಕನಿಗೂ ಗಾಯವುಂಟಾಗಿದೆ. ಇಂದು ಬೆಳಿಗ್ಗೆ 7 ಗಂಟೆಗೆ ಕೊಟ್ಟಾರಕ್ಕರ ನೀಲೇಶ್ವರ ಎಂಬಲ್ಲಿ ಅಪಘಾತ ಸಂಭವಿಸಿದೆ. ಮೃತಪಟ್ಟವರು ಹರಿಲಾಲ್ (54), ಕಾರ್ಮಲ್ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಪಾರ್ತಿಪ್ (15), ಕೆಎಸ್‌ಆರ್‌ಟಿಸಿ ನೌಕರ ಅಜಯ್ ಕುಮಾರ್ (45) ಎಂದು  ಗುರುತುಹಚ್ಚ ಲಾಗಿದೆ.

ಬೆಳಿಗ್ಗೆ ಶಾಲೆಗೆ ತೆರಳಲೆಂದು ಮಕ್ಕಳು ಬಸ್ ಕಾಯುತ್ತಿದ್ದ ಮಧ್ಯೆ ಅಪರಿಮಿತ ವೇಗದಲ್ಲಿ ತಲುಪಿದ ಮಣ್ಣು ಹೇರಿದ್ದ ಟಿಪ್ಪರ್ ಲಾರಿ ನಿಯಂತ್ರಣ ತಪ್ಪಿ ಬಸ್ ನಿಲ್ದಾಣಕ್ಕೆ ನುಗ್ಗಿದೆ. ಅಲ್ಲದೆ ಮಗುಚಿದ್ದು ಮಕ್ಕಳು ಟಿಪ್ಪರ್‌ನಡಿ ಯಲ್ಲೂ, ಮಣ್ಣಿನಡಿಯಲ್ಲೂ ಸಿಲುಕಿಕೊಂಡಿದ್ದರು. ಅಪಘಾತ ಸಮಯದಲ್ಲಿ ಇಲ್ಲಿ ಎಂಟು ಮಂದಿ ಬಸ್ ಕಾಯುತ್ತಿದ್ದರೆಂದು ತಿಳಿದು ಬಂದಿದೆ. ಇದರಲ್ಲಿ ಏಳು ಮಂದಿ ವಿದ್ಯಾರ್ಥಿಗಳಾಗಿದ್ದಾರೆ. ಪೊಲೀಸರು, ಅಗ್ನಿಶಾಮಕದಳ, ಸ್ಥಳೀಯರು ಜಂಟಿ ಯಾಗಿ ರಕ್ಷಣಾ ಕಾರ್ಯಕ್ಕೆ ನೆರವಾ ದರು. ಗಾಯಗೊಂಡ ವಿದ್ಯಾರ್ಥಿಗಳನ್ನು ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆ ಯಲ್ಲೂ, ಸಮೀಪದ ಖಾಸಗಿ ಆಸ್ಪತ್ರೆ ಯಲ್ಲೂ ದಾಖಲಿಸಲಾಗಿದೆ. ಕುಶಾಲ್, ರಿಷಬ್ ಬೋಬನ್, ನವನೀತ್, ಜಿಬಿ ಮೋಳ್, ಟಿಪ್ಪರ್ ಚಾಲಕ ನಿಸಾಂ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

RELATED NEWS

You cannot copy contents of this page