ಟ್ರಾಫಿಕ್ ಪರಿಷ್ಕಾರ ಸಮಾಲೋಚನೆ ನಡೆಸಿ ಕೈಗೊಂಡ ತೀರ್ಮಾನ ವ್ಯಾಪಾರಿಗಳ ಆರೋಪ ಹುರುಳಿಲ್ಲದ್ದು- ಕುಂಬಳೆ ಪಂ. ಆಡಳಿತ ಸಮಿತಿ

ಕುಂಬಳೆ:  ಕುಂಬಳೆ ಪೇಟೆಯ ಸಮಗ್ರ ಅಭಿವೃದ್ಧಿ ಮುಂದಿಟ್ಟು ಎಲ್ಲರೊಂದಿಗೆ ಚರ್ಚಿಸಿದ ಬಳಿಕ ಪಂಚಾಯತ್ ಆಡಳಿತ ಸಮಿತಿ ಕುಂಬಳೆಯಲ್ಲಿ ಟ್ರಾಫಿಕ್ ಪರಿಷ್ಕಾರ ಜ್ಯಾರಿಗೊಳಿಸಿರುವುದಾಗಿಯೂ ಈ ಬಗ್ಗೆ ಆಧಾರರಹಿತ ಆರೋಪವನ್ನು ಅಲ್ಲಗಳೆದು ಆಡಳಿತ ಸಮಿತಿ ಸದಸ್ಯರು ಸುದ್ಧಿಗೋಷ್ಠಿ ನಡೆಸಿದರು. ರಾಜಕೀಯ ಪಕ್ಷ, ವ್ಯಾಪಾರಿ ಮೋಟಾರು ಕಾರ್ಮಿಕರ ಪ್ರತಿನಿಧಿಗಳು ಭಾಗವಹಿಸಿದ ಸಭೆಯ ತೀರ್ಮಾನ ಪ್ರಕಾರ ಈಗ ಪರಿಷ್ಕಾರ ಜ್ಯಾರಿಗೊಳಿಸಲಾಗಿದೆ. ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮುಖಂಡರಾದ ರಾಜೇಶ್ ಮನಯತ್, ಕಾರ್ಯದರ್ಶಿ ಸತ್ತಾರ್ ಆರಿಕ್ಕಾಡಿ, ಕೋಶಾಧಿಕಾರಿ ಅನ್ವರ್ ಸಿಟಿ ಸಹಿತದವರು ಭಾಗವಹಿಸಿದ ಸಭೆಯಲ್ಲಿ  ೬ನೇ ನಂಬ್ರ ಬಸ್ ನಿಲ್ದಾಣದ ಸ್ಥಳ ನಿಗದಿಪಡಿಸಲಾಗಿತ್ತು. ಟ್ರಾಫಿಕ್ ಪರಿಷ್ಕಾರದಲ್ಲಿ ದೂರುಗಳಿದ್ದರೆ ತಿಳಿಸಲು ೧೫ ದಿನದ ಕಾಲಾವಧಿ ನೀಡಲಾಗಿತ್ತು. ಅಂದಿನ ಕಾರ್ಯದರ್ಶಿ ಹಾಗೂ ಆಡಳಿತ ಸಮಿತಿ ಮಧ್ಯೆಗಿನ ವಿವಾದದಲ್ಲಿ ತೀರ್ಮಾನಗಳನ್ನು ಜ್ಯಾರಿಗೊಳಿಸಲು ಸಾಧ್ಯವಾಗದೆ ಇದ್ದ ಕಾರಣ ಹೊಸ ಆಡಳಿತ ಸಮಿತಿ ಟ್ರಾಫಿಕ್ ಪರಿಷ್ಕಾರ ಜ್ಯಾರಿಗೊಳಿಸಿದೆ. ಆದರೆ ಬಸ್ ಮಾಲಕರ ಅಸೋಸಿಯೇಶನ್, ಬಸ್ ಕಾರ್ಮಿಕರು ಇದನ್ನು ವಿರೋಧಿಸಿದರಾದರೂ ಟ್ರಾಫಿಕ್ ಸಮಿತಿಯ, ಆಡಳಿತ ಸಮಿತಿಯ ತೀರ್ಮಾನ ಜ್ಯಾರಿಗೊಳಿಸಲಾಗಿದೆ.

ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮುಖಂಡರ ಉಪಸ್ಥಿತಿಯಲ್ಲಿ ಪಂಚಾಯತ್ ಆಡಳಿತ ಸಮಿತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿರುವುದು. ತಮ್ಮೊಂದಿಗೆ ಇದ್ದವರು ಬೇರೆ ಯಾವುದೇ ಬಗ್ಗೆ ಚಿಂತನೆ ನಡೆಸದೆ ಪಂಚಾಯತ್ ಕಚೇರಿ ಮಾರ್ಚ್ ನಡೆಸಲು ತೀರ್ಮಾನಿಸಿದ್ದಾರೆ. ಮುಷ್ಕರದಲ್ಲಿ ಸಿಪಿಎಂ, ಎಸ್‌ಡಿಪಿಐ ಎಂಬೀ ಸಂಘಟನೆಗಳ ಹಸ್ತಕ್ಷೇಪ ಇದೆಯೋ ಎಂದು ಶಂಕಿಸುತ್ತಿರುವುದಾಗಿ ಜನಪ್ರತಿನಿಧಿಗಳು ನುಡಿದರು. ಕೆಲವು ಕಾಮಗಾರಿಗಳು ಬಾಕಿ ಉಳಿದಿರುವ ಕಾರಣ, ಚುನಾವಣೆ ನೀತಿಸಂಹಿತೆಯಿಂ ದಾಗಿ ಟೇಕ್ ಎ ಬ್ರೇಕ್, ಮೀನು ಮಾರುಕಟ್ಟೆಗಳನ್ನು ತೆರೆದುಕೊಡಲು ಸಾಧ್ಯವಾಗಲಿಲ್ಲ. ತುರ್ತು ಪ್ರಾಮುಖ್ಯ ದೊಂದಿಗೆ ಇವುಗಳನ್ನು ತೆರೆದು ಕೊಡಲು ಕ್ರಮ ಕೈಗೊಳ್ಳಲಾಗುವುದೆಂದು ಆಡಳಿತ ಸಮಿತಿ ತಿಳಿಸಿತು.

ಕಾಲ್ನಡೆ ದಾರಿಯಲ್ಲಿ ವ್ಯಾಪಾರ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪರವಾನಗಿ ರಹಿತವಾಗಿ ಕಾರ್ಯಾಚರಿಸುವ ಹೋಟೆಲ್‌ಗಳು, ಗೂಡಂಗಡಿಗಳು ಎಂಬಿವುಗಳ ವಿರುದ್ಧವೂ, ಡ್ರೈನೇಜ್ ವ್ಯವಸ್ಥೆಯಿಲ್ಲದ ಹೋಟೆಲ್, ಕೂಲ್ ಬಾರ್‌ಗಳ ವಿರುದ್ಧವೂ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದೆಂದು ಅವರು ಸ್ಪಷ್ಟಪಡಿಸಿದರು. ಸುದ್ಧಿಗೋಷ್ಠಿಯಲ್ಲಿ ಅಧ್ಯಕ್ಷ ವಿ.ಪಿ. ಅಬ್ದುಲ್, ಉಪಾಧ್ಯಕ್ಷ ಎಂ. ಬಲ್ಕೀಸ್, ಜಿಲ್ಲಾ ಪಂಚಾಯತ್ ಸದಸ್ಯ ಅಸೀಸ್ ಕಳತ್ತೂರು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ.ಪಿ. ಖಾಲಿದ್, ಇನಾಸ್ ಫವಾಸ್ ಕೋಹಿನೂರ್, ಮಂಜುನಾಥ ಆಳ್ವ ಭಾಗವಹಿಸಿದರು.

You cannot copy contents of this page