ಪುನರ್ವಸತಿ ಕೇಂದ್ರದಲ್ಲಿದ್ದ  ಕಾಸರಗೋಡು ನಿವಾಸಿ ಮೃತ್ಯು:  ಸಂಬಂಧಿಕರಿಗಾಗಿ ಹುಡುಕಾಟ

 
ಕಾಸರಗೋಡು: ಪಯ್ಯನ್ನೂರು ಬಳಿಯ ಪಿಲಾತ್ತರ ಹೋಪ್ ಪುನರ್ವಸತಿ ಕೇಂದ್ರದಲ್ಲಿ ವಾಸಿಸುತ್ತಿದ್ದ ಕಾಸರಗೋಡು ನಿವಾಸಿ ಮೃತಪಟ್ಟಿದ್ದಾರೆ. ಗೋಕುಲ್‌ದಾಸ್ (೬೨) ಎಂಬವರು ಮೃತ ವ್ಯಕ್ತಿ ಯೆಂದು ತಿಳಿಸಲಾಗಿದೆ. ಪರಿಯಾರಂ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಇವರ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಯಾರೂ ಇಲ್ಲದುದರಿಂದ ಮೂರು ವರ್ಷಗಳ ಹಿಂದೆ ಕಾಸರಗೋಡು ನಗರ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅವರ ನಿರ್ದೇಶ ಪ್ರಕಾರ ವ್ಯಕ್ತಿಯನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗಿತ್ತು.  ಅಸೌಖ್ಯ ಬಾಧಿಸಿ ಹಾಸಿಗೆ ಹಿಡಿದಿದ್ದ ಇವರು ನಿನ್ನೆ ಮಧ್ಯಾಹ್ನ ವೇಳೆ ಮೃತಪಟ್ಟಿದ್ದಾರೆ. ಮೃತದೇಹವನ್ನು ಪಯ್ಯನ್ನೂರು ಪ್ರಿಯದರ್ಶಿನಿ ಆಸ್ಪತ್ರೆಯ ಶವಾಗಾರದಲ್ಲಿರಿ ಸಲಾಗಿದೆ. ಇವರ ಸಂಬಂಧಿಕರು ಅಥವಾ ಸ್ನೇಹಿತರಿದ್ದಲ್ಲಿ ಶುಕ್ರವಾರ ಮಧ್ಯಾಹ್ನ  ೧೨ ಗಂಟೆಗೆ ಮುಂಚಿತ ಕಾಸರಗೋಡು ನಗರ ಠಾಣೆಯ ಪೊಲೀಸರನ್ನು ಅಥವಾ ಪುನರ್ವಸತಿ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬೇಕಾಗಿ ಪೊಲೀಸರು ತಿಳಿಸಿದ್ದಾರೆ.  ಯಾರೂ ಬಾರದಿದ್ದಲ್ಲಿ  ಜನಪ್ರತಿನಿಧಿಯ ಅಭಿಪ್ರಾಯ ಪ್ರಕಾರ ಮೃತದೇಹದ ಅಂತ್ಯಸಂಸ್ಕಾರ ನಡೆಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page