ಮೂವರು ಕೇರಳೀಯರೂ ಸೇರಿ 38 ಅಪರಾಧಿಗಳಿಗೆ ನೀಡಿದ ಗಲ್ಲು ಶಿಕ್ಷೆ ಖಾಯಂಗೊಳಿಸಿ ಹೈಕೋರ್ಟ್ ತೀರ್ಪು 

ಅಹಮ್ಮದಾಬಾದ್: 2008ರಂದು ದೇಶವನ್ನೇ ನಡುಗಿಸಿದ ಗುಜರಾತ್‌ನ ಅಹಮ್ಮದಾಬಾದ್‌ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಕೇರಳದ ಮೂವರು ಸೇರಿ 38  ಅಪರಾಧಿಗಳಿಗೆ ವಿಶೇಷ ನ್ಯಾಯಾಲಯ ನೀಡಿದ ಮರಣದಂಡನೆ ಶಿಕ್ಷೆಯನ್ನು ಗುಜರಾತ್ ಹೈಕೋರ್ಟ್‌ನ ವಿಭಾಗೀಯ ಪೀಠ ಖಾಯಂಗೊಳಿಸಿ ತೀರ್ಪು ನೀಡಿದೆ. ಮಾತ್ರವಲ್ಲ ಈ ಪ್ರಕರಣದಲ್ಲಿ 11 ಅಪರಾಧಿಗಳಿಗೆ ವಿಶೇಷ ನ್ಯಾಯಾಲಯ ನೀಡಿದ ಜೀವಾವಧಿ ಸಜೆ ಮತ್ತು ಸರಣಿ ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷರೂ.ನಂತೆ ಹಾಗೂ ಗಾಯಗೊಂ ಡವರಿಗೆ ತಲಾ 5 ಲಕ್ಷ ರೂ.ನಂತೆ  ನಷ್ಟ ಪರಿಹಾರ ನೀಡುವಂತೆ  ನೀಡಿದ್ದ ತೀರ್ಪನ್ನು ಹೈಕೋರ್ಟ್‌ನ ವಿಭಾಗೀಯ ಪೀಠ ಎತ್ತಿ ಹಿಡಿದು ತೀರ್ಪು ನೀಡಿದೆ.  ಈ ಪ್ರಕರಣದಲ್ಲಿ ಒಟ್ಟು 49 ಮಂದಿ ಅಪರಾಧಿಗಳಿದ್ದು ಅವರು ವಿಶೇಷ ನ್ಯಾಯಾಲಯ ನೀಡಿದ ಶಿಕ್ಷೆ ಅನುಭವಿಸಬೇಕಾಗಿದೆ.

ಹೀಗೆ ಮರಣದಂಡನೆ ಶಿಕ್ಷೆಗೊಳಗಾ ದವರಲ್ಲಿ ಕೇರಳೀಯರಾದ ಕೋಟ್ಟಯಂ ಈರಾಟುಪೇಟೆ ಪಿಡಿಯೇಕ್ಕಲ್ ನಿವಾಸಿಗಳು ಹಾಗೂ ಸಹೋದರರೂ ಆಗಿರುವ ಶಿಬಿಲಿ ಶಾದುಲಿ ಮತ್ತು ಮಲಪ್ಪುರಂ ಪೆರುವಳ್ಳೂರು ಕುರುವಾಕಲ್ ಎಡಪ್ಪತೊಟ್ಟಿಗ ಶರಫುದ್ದೀನ್ ಎಂಬವರೂ ಒಳಗೊಂಡಿದ್ದಾರೆ. ಮಾತ್ರವಲ್ಲ ಈ ಪ್ರಕರಣದಲ್ಲಿ  ಜೀವಾವಧಿ ಸಜೆಗೊ ಳಗಾದ 11 ಮಂದಿ ಅಪರಾಧಿಗಳಲ್ಲಿ ಕೇರಳದ  ಆಲ್ವಾ ಉಳಿಯನ್ನೂರು ನಿವಾಸಿ  ಮೊಹಮ್ಮದ್ ಅನ್ಸಾರ್ ಎಂಬಾ ತನೂ ಒಳಗೊಂಡಿದ್ದಾನೆ.

ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ದೇಶದಲ್ಲೇ ಅತೀ ಹೆಚ್ಚು ಮಂದಿ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ನೀಡಲಾದ ಪ್ರಕರಣವೂ ಇದಾಗಿದೆ.

ಶಿಕ್ಷೆಗೊಳಗಾದ ಅಪರಾಧಿಗಳು ನಿಷೇಧಿತ ಸಿಮಿ ಸಂಘಟನೆಗೆ ಸೇರಿದವರಾಗಿದ್ದಾರೆ.   ಸಿಮಿ ಸಂಘಟನೆಗೆ ಭಾರತ ಸರಕಾರ ನಿಷೇಧ ಹೇರಿದ ನಂತರ ಅದರ ಸದಸ್ಯರು ಇಂಡಿಯನ್ ಮುಜಾಹಿದ್ದೀನ್ ಎಂಬ ಹೆಸರಲ್ಲಿ  ಹೊಸ ಉಗ್ರಗಾಮಿ ಸಂಘಟನೆಗೆ ರೂಪು ನೀಡಿ ಈ ಸರಣಿ ಬಾಂಬ್ ಸ್ಫೋಟ ನಡೆಸಿದ್ದರು. 2007ರಲ್ಲಿ ಈ ಪ್ರಕರಣದ ಆರೋಪಿಗಳು ಕೇರಳದ ವಾಘಾಮಣ್‌ನಲ್ಲಿ ಗುಪ್ತವಾಗಿ ಶಿಬಿರ ಹೂಡಿ ಅದರಲ್ಲಿ ಅಹಮ್ಮದಾ ಬಾದ್ ಸರಣಿ ಬಾಂಬ್ ಸ್ಫೋಟಕ್ಕೆ ಒಳಸಂಚು ಹಾಗೂ ಸ್ಕೆಚ್‌ಗೂ ರೂಪು ನೀಡಲಾಗಿತ್ತೆಂಬುವುದು ತನಿಖೆಯಲ್ಲಿ ಸ್ಪಷ್ಟಗೊಂಡಿತ್ತು.

೨೦೦೮ ಜುಲೈ 26ರಂದು ಅಹಮ್ಮದಾಬಾದ್ ನಗರದ 21 ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಫೋಟ ಉಂಟಾಗಿತ್ತು. ಇದರಲ್ಲಿ 56 ಮಂದಿ ಸಾವನ್ನಪ್ಪಿದ್ದರು. 250ಕ್ಕೂ ಹೆಚ್ಚು ಮಂದಿ ಗಾಯಗೊಂ ಡಿದ್ದರು. ಈ ಸ್ಫೋಟದ ಹೊಣೆಗಾರಿ ಕೆಯನ್ನು ಇಂಡಿಯನ್ ಮುಜಾಹಿದ್ದೀನ್ ವಹಿಸಿಕೊಂಡಿತ್ತು. 2022 ಫೆಬ್ರವರಿ 8ರಂದು ವಿಶೇಷ ನ್ಯಾಯಾಲಯ ಈಪ್ರಕರಣದ ತೀರ್ಪು ನೀಡಿತ್ತು. ಇದರಲ್ಲಿ ನ್ಯಾಯಾಲಯ ೪೯ ಆರೋಪಿಗಳಿಗೆ ಶಿಕ್ಷೆ ನೀಡಿ, 28 ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಹೀಗೆ ಶಿಕ್ಷೆಗೊ ಳಗಾದ ಅಪರಾಧಿಗಳು ನಂತರ ಆ ತೀರ್ಪಿನ ವಿರುದ್ಧ ಗುಜರಾತ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ ಹೈಕೋರ್ಟ್  ವಿಶೇಷ ನ್ಯಾಯಾಲಯ ನೀಡಿದ ತೀರ್ಪನ್ನು ಖಾಯಂಗೊಳಿಸಿ ಕೊನೆಗೆ ತೀರ್ಪು ನೀಡಿದೆ.

You cannot copy contents of this page