ದೈತೋಟದಲ್ಲಿ ಗುಡ್ಡೆ ಕುಸಿತ : ವಾಹನ ಸಂಚಾರಕ್ಕೆ ಭೀತಿ

ಉಪ್ಪಳ: ಇತ್ತೀಚೆಗೆ ಸುರಿದ ಮಳೆಗೆ ರಸ್ತೆ ಬದಿಯ ಗುಡ್ಡೆ ಕುಸಿದಿದ್ದು ಇದರಿಂದ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಸಜಂಕಿಲ-ಆವಳ-ಚೇವಾರು ಸಂಪರ್ಕ ರಸ್ತೆಯ ದೈತೋಟ ಎಂಬಲ್ಲಿ ಗುಡ್ಡೆ  ಕುಸಿದುಬಿದ್ದಿದೆ. ಇದರಿಂದ  ಈ ರಸ್ತೆಯಲ್ಲಿ ಸಂಚರಿಸುವ ವಾಹನ ಪ್ರಯಾಣಿಕರಿಗೆ ಆತಂಕ ಉಂಟುಮಾಡಿದೆ. ಇದೇ ಸ್ಥಳದಲ್ಲಿ ಕಳೆದ ವರ್ಷ ಮಳೆಗಾಲ ಕೂಡಾ  ಗುಡ್ಡೆ ಕುಸಿದಿತ್ತು. ಈ ಬಗ್ಗೆ ಪಂಚಾಯತ್ ಅಧಿಕಾರಿಗಳಿಗೆ ದೂರು ನೀಡಿದ್ದರೂ ಗುಡ್ಡೆ ಕುಸಿತ ತಡೆಯಲಿರುವ ಕ್ರಮ ಕೈಗೊಂಡಿಲ್ಲ. ಈ ವರ್ಷವೂ ಮಳೆ ಸುರಿಯುತ್ತಿದ್ದಂತೆ  ಗುಡ್ಡೆ ಕುಸಿದಿದ್ದು, ಇದೇ ಸ್ಥಿತಿ ಮುಂದುವರಿದರೆ ವಾಹನ ಸಂಚಾರಕ್ಕೆ ಅಡಚಣೆ ಎದುರಾಗಲಿದೆಯೆಂದು ನಾಗರಿಕರು ತಿಳಿಸುತ್ತಿದ್ದಾರೆ. ವಾರ್ಡ್ ಸದಸ್ಯ ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ ಸ್ಥಳ ಸಂದರ್ಶಿಸಿದ್ದು ಇಲ್ಲಿ ಗುಡ್ಡೆ ಕುಸಿತ ತಡೆಗಟ್ಟಲು ಶಾಶ್ವತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.

You cannot copy contents of this page