ವಯನಾಡ್ ಭೂಕುಸಿತ: ಐದು ಮಂದಿ ಇನ್ನೂ ನಾಪತ್ತೆ : ಕ್ರೈಂ ಬ್ರಾಂಚ್ ಸೇರಿದಂತೆ ಅವಳಿ ತನಿಖೆಗೆ ನಿರ್ದೇಶ

ಕಲ್ಪೆಟ್ಟ: ವಯನಾಡಿನ ಕಳ್ಳಾಡಿ ಪೊಯಿಲ್ ಸುರಂಗ ಮಾರ್ಗದಲ್ಲಿ ನಿನ್ನೆ ಉಂಟಾದ  ಭೂಕುಸಿತದಲ್ಲಿ ಇನ್ನೂ ಐದು ಮಂದಿ ನಾಪತ್ತೆಯಾಗಿದ್ದು ಇವರ ಪತ್ತೆಗಾ ಗಿರುವ ಶೋಧ ಕಾರ್ಯಾಚರಣೆ ಮುಂದುವರಿ ಯುತ್ತಿದೆ. ಭೂಕುಸಿತದಲ್ಲಿ ನಿರ್ಮಾಣ ಕಾರ್ಮಿಕರಾದ ಝಾರ್ಖಂಡ್ ನಿವಾಸಿ ಅಲ್‌ಮೇಲ್ ದೊಡಾದ್ ರಾಯ್, ಬಿಹಾರದ ಬಿಕಾಶ್ ಕುಮಾರ್ ಸಿಂಗ್ ಮತ್ತು ಆಪರೇಟರ್ ಮಧ್ಯಪ್ರದೇಶದ ಚಂದ್ರಪಾನ್ ಪಾಲ್ ಎಂಬವರು ಸಾವನ್ನಪ್ಪಿದ್ದು  9 ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸುರಂಗ ಮಾರ್ಗ ನಿರ್ಮಾಣ ಕೆಲಸದಲ್ಲಿ ಒಟ್ಟು 19 ಮಂದಿ ಕಾರ್ಮಿಕರು ನಿರತರಾಗಿದ್ದರು.  ಇದg ಲ್ಲಿ ಐದು ಮಂದಿ ಇನ್ನೂ ನಾಪತ್ತೆ ಯಾಗಿದ್ದು, ಅವರ ಪತ್ತೆಗಾಗಿ ರುವ ರಕ್ಷಣಾ ಕಾರ್ಯಾಚರಣೆ ಮುಂದು ವರಿಯುತ್ತಿದೆ. ಅವೈಜ್ಞಾನಿಕ ರೀತಿಯಲ್ಲಿ ಸುರಂಗಮಾರ್ಗ ನಿರ್ಮಿಸಲಾಗುತ್ತಿದ್ದು ಅದುವೇ ಇಲ್ಲಿ ಭೂಕುಸಿತ ಉಂಟಾ ಗಲು ಕಾರಣವೆಂಬ ಆರೋಪಗಳು ಇದರ ಜತೆಗೆ ಉಂಟಾಗಿದೆ. ಭೂಕುಸಿತದಲ್ಲಿ ಒಂದು ಮನೆ ಮತ್ತು  ಚರ್ಚ್ ಕೂಡಾ ಸಂಪೂರ್ಣ ನೆಲ ಮವಾಗಿದೆ ಮಾತ್ರವಲ್ಲ ಅಲ್ಲಿರುವ ಬಸ್ ನಿಲ್ದಾಣ ಮತ್ತು ಸೇತುವೆಯೂ ಮಣ್ಣಿನಡಿ ಮುಚ್ಚಿ ಹೋಗಿದೆ. ಆವೇಳೆ ಇಲ್ಲಿ ಸುಮಾರು 15ರಷ್ಟು ಕಾರ್ಮಿಕರು ಕ್ಯಾಬಿನ್ ನೊಳಗೆ  ದುಡಿಯುತ್ತಿ ದ್ದರೆನ್ನಲಾಗಿದೆ.  ಭೂಕುಸಿತದ ವೇಳೆ ಆ ಜಾಗದಲ್ಲಿದ್ದವರೆಲ್ಲಾ ತಕ್ಷಣ ಅಲ್ಲಿಂದ ಓಡಿ ಪರಾರಿ ಯಾಗಿದ್ದು, ಇದರಿಂದ ಹೆಚ್ಚಿನ ಪ್ರಾಣಾಪಾಯ ಹಾಗೂ ನಾಶನಷ್ಟ ಅದೃಷ್ಟವಶಾತ್ ತಪ್ಪಿಹೋಗಿದೆ. ಸಚಿವ ಟಿ. ಸಿದ್ದಿಕ್ ಘಟನೆ ನಡೆದ ಸ್ಥಳಕ್ಕಾಗಮಿಸಿ ಸ್ಥಿತಿಗತಿಗಳ  ಬಗ್ಗೆ ಪರಿಶೀಲನೆಯಲ್ಲಿ ತೊಡಗಿದ್ದಾರೆ.

You cannot copy contents of this page