ಸೀತಾಂಗೋಳಿ: ಸೀತಾಂಗೋಳಿ ಪೇಟೆಯಲ್ಲಿ ವ್ಯಾಪಾರಿಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಾಣಬೇಕೆಂದು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಸೀತಾಂಗೋಳಿ ಘಟಕ ಪುತ್ತಿಗೆ ಪಂಚಾಯತ್ ಅಧ್ಯಕ್ಷೆ ಆಯಿಷ ಶಹೀಮ ಫಿದರಿಗೆ ಮನವಿ ನೀಡಿದೆ.
ಬಾಡಿಗೆ, ಪರವಾನಗಿ ಹಾಗೂ ಕಾನೂನು ಪ್ರಕಾರದ ಎಲ್ಲಾ ಶುಲ್ಕಗಳನ್ನು ಪಂಚಾಯತ್ ಹಾಗೂ ಸರಕಾರಕ್ಕೆ ಪಾವತಿಸಿ ವ್ಯಾಪಾರ ನಡೆಸುವ ವ್ಯಾಪಾರಿಗಳಿಗೆ ತೊಂದರೆಯಾಗುವ ರೀತಿಯಲ್ಲಿ ಅನಧಿಕೃತ ವ್ಯಾಪಾರ, ರಸ್ತೆ ಬದಿ ವ್ಯಾಪಾರ, ಗೂಡಂಗಡಿಗಳ ಹಾವಳಿ, ಅನಧಿಕೃತ ಪಾರ್ಕಿಂಗ್, ಅನಧಿಕೃತ ವಾಹನಗಳಲ್ಲಿ ವ್ಯಾಪಾರ, ಪೇಟೆ ಮಧ್ಯದಲ್ಲಿ ಮೀನು ವ್ಯಾಪಾರ, ಕಾನೂನು ವಿರುದ್ಧವಾಗಿ ಸೀತಾಂ ಗೋಳಿ ಪೇಟೆಯಲ್ಲಿ ಸ್ಥಾಪಿಸಿದ ಮಿಲ್ಮಾ ಬೂತ್, ಒಳ ಚರಂಡಿ ವ್ಯವಸ್ಥೆ ಇಲ್ಲದೆ ಪೇಟೆಯಲ್ಲಿ ಮಳೆ ನೀರು ಹರಿಯುವ ಸಮಸ್ಯೆ ಮೊಲಾದವುಗಳಿಗೆ ಪರಿಹಾರ ಕಾಣಲು ಮನವಿಯಲ್ಲಿ ಆಗ್ರಹಿಸಲಾ ಗಿದೆ. ಘಟಕದ ಅಧ್ಯಕ್ಷ ನಸೀರ್ ಕಣ್ಣೂರು ಅವರ ನೇತೃತ್ವದಲ್ಲಿ ಪ್ರಧಾನ ಕಾರ್ಯದರ್ಶಿ ಸುಕುಮಾರ ಕುದ್ರೆಪ್ಪಾಡಿ, ಕೋಶಾಧಿಕಾರಿ ಸಿದ್ದಿಕ್ ಎಸ್.ಪಿ, ಬ್ಲೋಕ್ ಪಂ. ಸದಸ್ಯ ಜುನೈದ್ ಉರ್ಮಿ, ಪ್ರಶಾಂತ್ ಶೆಟ್ಟಿ ಬೇಳ, ಸತೀಶ ಬೇಕರಿ, ಜಯಕುಮಾರ್ ಜಿ.ಕೆ. ಮನವಿ ತಂಡದಲ್ಲಿದ್ದರು. ಪಂಚಾಯತ್ ಉಪಾಧ್ಯಕ್ಷ ಇ.ಕೆ. ಮೊಹಮ್ಮದ್ ಕುಂಞಿ, ಸದಸ್ಯೆ ಲಕ್ಷ್ಮಿ ಭಟ್ ಈ ವೇಳೆ ಉಪಸ್ಥಿತರಿದ್ದರು.






