ಉಪ್ಪಳ: ಅನಾರೋಗ್ಯದ ಕಾರಣ ದಿಂದಾಗಿ ಮೊಣಕಾಲಿನ ಮೇಲ್ಭಾಗ ದವರೆಗೆ ಕತ್ತರಿಸಬೇಕಾಗಿ ಬಂದ ಮಂಗಲ್ಪಾಡಿ ಪಂಚಾಯತ್‌ನ ಕುಬ ಣೂರು, ಪಂಜ ನಿವಾಸಿ ಸುರೇಶ್‌ರಿಗೆ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಪ್ರಧಾನಮಂತ್ರಿ ವಯೋ ಶ್ರೀ ಯೋಜನೆಯಡಿ ಗಾಲಿಕುರ್ಚಿಯನ್ನು ನಿನ್ನೆ ವಿತರಿಸಿದರು.
ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ ವಲ್ಸರಾಜ್, ಬಿಜೆಪಿ ಕುಂಬಳೆ ಮಂಡಲ ಉಪಾಧ್ಯಕ್ಷ ವಿಕ್ರಂ ಪೈ, ಪಂಚಾಯತ್ ಸದಸೆ್ಯ ಸಾಕ್ಷಿ ಶೆಟ್ಟಿ, ಮಂಗಲ್ಪಾಡಿ ನಾರ್ತ್ ಬಿಜೆಪಿ ಅಧ್ಯಕೆÀ್ಷ ರೇವತಿ ಚೆರುಗೋಳಿ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯರಾದ ಬಾಬು ಕುಬಣೂರು, ಹರಿನಾಥ ಭಂಡಾರಿ, ರಾಮಚಂದ್ರ ಬಲ್ಲಾಳ್, ಸ್ಥಳೀಯ ಮುಖಂಡರಾದ ಈಶ್ವರ ಪಂಜ, ಜನಾರ್ದನ, ರಮೇಶ್ ಪಂಜ ಮೊದಲಾದವರು ಭಾಗವಹಿಸಿದ್ದರು






