ಮಧೂರು ಕ್ಷೇತ್ರದ ಪಾರಂಪರ್ಯ ಅರ್ಚಕ ವೇಣುಗೋಪಾಲ ಕಲ್ಲೂರಾಯ ನಿಧನ

ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ಪಾರಂಪರ್ಯ ಅರ್ಚಕ ವೇಣುಗೋಪಾಲ ಕಲ್ಲೂರಾಯ (78) ನಿಧನ ಹೊಂದಿದರು. ಸ್ವಗೃಹವಾದ ಮಧೂರು ಮೇಲಿನಮನೆಯಲ್ಲಿ ನಿನ್ನೆ ರಾತ್ರಿ ನಿಧನ ಸಂಭವಿಸಿದೆ. ಶಿವಳ್ಳಿ ಬ್ರಾಹ್ಮಣಸಭಾ ಕಾಸರಗೋಡು ವಲಯ ಸಮಿತಿ ಮಾಜಿ ಅಧ್ಯಕ್ಷ, ಕೇಂದ್ರ ಸಮಿತಿ ಮಾಜಿ ಉಪಾಧ್ಯಕ್ಷರೂ ಆಗಿದ್ದರು. ನಿವೃತ್ತ ಶಿಕ್ಷಕನೂ ಆಗಿದ್ದ ಇವರು ಯಕ್ಷಗಾನ ಕಲಾವಿದರೂ, ಸಂಗೀತ ವಿದ್ವಾನ್, ಪುರೋಹಿತ ಹಾಗೂ ಧಾರ್ಮಿಕ, ಸಾಮಾಜಿಕ ಮುಂದಾಳುವೂ ಆಗಿದ್ದರು. ಮೃತರ ಅಂತ್ಯಸಂಸ್ಕಾರ ಇಂದು ಬೆಳಿಗ್ಗೆ ನಡೆಯಿತು. ಮೃತರು ಪತ್ನಿ ಕಮಲಾಕ್ಷಿ ಯಾನೆ ಸೀಮ, ಮಕ್ಕಳಾದ ವಸಂತ ಕಲ್ಲೂರಾಯ (ಮಧೂರು ಕ್ಷೇತ್ರದ ಅರ್ಚಕ), ಕಿಶೋರ್ ಯಾನೆ ಹರಿಕೇಶವ ಕಲ್ಲೂರಾಯ (ಉಡುಪಿಯ ಕಾಲೇಜಿನಲ್ಲಿ ಉಪನ್ಯಾಸಕ), ಸೊಸೆ ಕಾವ್ಯಶ್ರೀ (ವನ್ಯಶ್ರೀ), ಸಹೋದರ ಬಾಲಚಂದ್ರ ಕಲ್ಲೂರಾಯ (ನಿವೃತ್ತ ಅಧ್ಯಾಪಕ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮತ್ತಿಬ್ಬರು ಸಹೋದರರಾದ ವೆಂಕಟಕೃಷ್ಣ ಕಲ್ಲೂರಾಯ, ಶಿವಾನಂದ ಕಲ್ಲೂರಾಯ, ಸಹೋದರಿ ಲಲಿತ ಎಂಬಿವರು ಈ ಹಿಂದೆ ನಿಧನ ಹೊಂದಿದ್ದಾರೆ. ವೇಣು ಗೋಪಾಲ ಕಲ್ಲೂರಾಯರ ನಿಧನಕ್ಕೆ ಶಿವಳ್ಳಿ ಬ್ರಾಹ್ಮಣ ಸಭಾ ಕಾಸರಗೋಡು ವಲಯ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಸಂತಾಪ ಸೂಚಿಸಿದ್ದಾರೆ.

RELATED NEWS

You cannot copy contents of this page