ಯುವಕನನ್ನು ಸೀಮೆ ಎಣ್ಣೆ ಸುರಿದು ಕಿಚ್ಚಿಟ್ಟು ಕೊಲೆಗೈಯ್ಯಲೆತ್ನ: ಯುವತಿ ಸಹಿತ ನಾಲ್ಕು ಮಂದಿ ಪೊಲೀಸ್ ಕಸ್ಟಡಿಯಲ್ಲಿ ಎಎಸ್‌ಪಿ ನೇತೃತ್ವದಲ್ಲಿ ಸಮಗ್ರ ತನಿಖೆ ಆರಂಭ

ಕುಂಬಳೆ: ಮೊಗ್ರಾಲ್‌ನಲ್ಲಿ ಯುವಕನನ್ನು ತಡೆದು ನಿಲ್ಲಿಸಿದೇಹಕ್ಕೆ ಸೀಮೆ ಎಣ್ಣೆ ಸುರಿದು ಕಿಚ್ಚಿಟ್ಟು ಕೊಲೆ ಗೈಯ್ಯಲು ಯತ್ನಿಸಿದ ಪ್ರಕರಣದಲ್ಲಿ ಯುವತಿ ಸಹಿತ ನಾಲ್ಕು ಮಂದಿ ಯನ್ನು ಕುಂಬಳೆ ಪೊಲೀಸರು ಕಸ್ಟಡಿಗೆ ತೆಗೆದು ತನಿಖೆ ನಡೆಸುತ್ತಿದ್ದಾರೆ. ತಮಿಳುನಾಡಿನ ನಾಗಪಟ್ಟಣಂ ನಿವಾಸಿಗಳಾದ ಶರವಣ, ಲಿಂಗ, ಮಾರಿ ಹಾಗೂ ವೆಳ್ಳುಪುರಂ  ನಿವಾಸಿಯಾದ ಇನ್ನೋರ್ವ  ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಕರ್ನಾಟಕದ ಹುಬ್ಬಳ್ಳಿ ನಿವಾಸಿಯೂ, ಮೊಗ್ರಾಲ್ ಕೊಪ್ಪಳದಲ್ಲಿ ವಾಸಿಸುವ ಸಾರಣೆ  ಮೇಸ್ತ್ರಿಯಾದ  ಅಬ್ದುಲ್ ಗಫೂರ್ (45)ರ ದೂರಿನ  ಮೇರೆಗೆ ಇವರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿ ಕಸ್ಟಡಿಗೆ ತೆಗೆಯಲಾಗಿದೆ. ನಿನ್ನೆ ಮುಂಜಾನೆ ೫ ಗಂಟೆ ವೇಳೆ ಕೊಪ್ಪಳಂ ರೈಲ್ವೇ ಕೆಳಸೇತುವೆ ಸಮೀಪ ಅಬ್ದುಲ್ ಗಫೂರ್‌ರನ್ನು ತಡೆದು ನಿಲ್ಲಿಸಿ ಅವರ ದೇಹಕ್ಕೆ ಸೀಮೆ ಎಣ್ಣೆ ಸುರಿದು ಕಿಚ್ಚಿಡಲಾಗಿತ್ತು.  ಬೊಬ್ಬೆ ಕೇಳಿ ತಲುಪಿದ ಸ್ಥಳೀಯರು ಅಬ್ದುಲ್ ಗಫೂರ್‌ರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದ್ದರು. ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಅಬ್ದುಲ್ ಗಫೂರ್‌ರನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಗಿದೆ.

ಸಾರಣೆ ಕೆಲಸದ ವತಿಯಿಂದ ನೀಡಲು ಬಾಕಿಯಿರುವ ೩೦೦೦ ರೂಪಾಯಿ ನೀಡದ ದ್ವೇಷದಿಂದ ತಂಡ ತಡೆದು ನಿಲ್ಲಿಸಿ ಕೊಲೆಗೈಯ್ಯಲೆ ತ್ನಿಸಿರುವುದಾಗಿ ಅಬ್ದುಲ್ ಗಫೂರ್ ಆರೋಪಿಸಿದ್ದಾರೆ. ಇದರಂತೆ ನಾಲ್ಕು ಮಂದಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಆದರೆ ನಾವು  ಆ ಕೃತ್ಯನಡೆಸಿಲ್ಲವೆಂದು ಕಸ್ಟಡಿಗೊಳಗಾ ದವರು ತಿಳಿಸಿದ್ದಾರೆ. ಆದ್ದರಿಂದ ಘಟನೆ ಕುರಿತು ಸಮಗ್ರ ತನಿಖೆ ನಡೆಸಲು ಪೊಲೀಸರು ತೀರ್ಮಾನಿಸಿದ್ದಾರೆ. ಇದರಂಗವಗಿ ರಾಷ್ಟ್ರೀಯ ಹೆದ್ದಾರಿಯ ವಿವಿಧ ಭಾಗಗಳಲ್ಲಿ ಸ್ಥಾಪಿಸಿರುವ ಸಿಸಿ ಟಿವಿ ಕ್ಯಾಮರಾಗಳ ದೃಶ್ಯಗಳನ್ನು ಪರಿಶೀ ಲಿಸಲು  ಪೊಲೀಸರು ತೀರ್ಮಾನಿಸಿ ದ್ದಾರೆ. ಕಾಸರಗೋಡು ಎಎಸ್‌ಪಿ ಕುಂಬಳೆಗೆ ತಲುಪಿ ಕಸ್ಟಡಿ ಯಲ್ಲಿರುವ ವ್ಯಕ್ತಿಗಳ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

RELATED NEWS

You cannot copy contents of this page