ಕಾಸರಗೋಡು: ಉತ್ತಮ ಪ್ರಜೆ ಗಳನ್ನು ಸೃಷ್ಟಿಸುವಲ್ಲಿ ಬಾಲ ಗೋಕುಲ ನಡೆಸುತ್ತಿರುವ ಸೇವೆ ಮಹತ್ತರವಾದುದು ಎಂಬುದಾಗಿ ಕೇಂದ್ರ ಸಹ ಸಚಿವ ಶ್ರೀಪಾದ್ ಯಶೋ ನಾಯಕ್ ತಿಳಿಸಿ ದ್ದಾರೆ. ಬಾಲಗೋಕುಲ ಉತ್ತರ ಕೇರಳಂ ರಾಜ್ಯ ವಾರ್ಷಿಕ ಸಮ್ಮೇಳನದಂಗ ವಾಗಿ ನಿನ್ನೆ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಭಾರತದ ಸಾಂಸ್ಕೃತಿಕ ಶಕ್ತಿಯನ್ನು ಬಲಪಡಿಸುವ ಚಟುವಟಿಕೆ ಬಾಲಗೋ ಕುಲ ಮೂಲಕ ನಡೆಯು ತ್ತಿದೆ. ತಂತ್ರ ಜ್ಞಾನ ಬಹುಬೇಗನೆ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ನಮ್ಮ ಮಕ್ಕಳು ಜಾಗತಿ ಕವಾಗಿ ಹೆಚ್ಚಿನ ತಿಳುವಳಿಕೆ ಹೊಂದ ಬೇಕಾಗಿದೆ ಎಂಬುದಾಗಿ ಸಚಿವ ತಿಳಿಸಿ ದರು. ಬಾಲಗೋಕುಲ ಉತ್ತರ ಕೇರಳಂ ಅಧ್ಯಕ್ಷ ಎಂ. ಸತ್ಯನ್ ಅಧ್ಯಕ್ಷತೆ ವಹಿಸಿದರು. ರಾಜ್ಯಸಭಾ ಸದಸ್ಯ ಸಿ.ಸದಾನಂದನ್ ಮಾಸ್ತರ್ ಮುಖ್ಯ ಅತಿಥಿಯಾಗಿದ್ದರು. ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಸಿ.ವಿ. ಪೊದುವಾಳ್, ಕಾರ್ಯಾಧ್ಯಕ್ಷ ಪಿ. ಹರಿಶ್ಚಂದ್ರ ನಾಯ್ಕ್, ಎನ್.ಎಂ.ಸದಾನಂದನ್, ಆರ್. ಪ್ರಸನ್ನ ಕುಮಾರ್, ಪಿ.ಕೆ. ವಿಜಯರಾಘವನ್, ರಾಜೇಂದ್ರ ಮವ್ವಾರು, ಆರ್ಯನಂದ ಮೊದಲಾದ ವರು ಮಾತನಾಡಿದರು. ಬಳಿಕ ನಡೆದ ಪ್ರತಿನಿಧಿಗಳ ಸಭೆಯಲ್ಲಿ ಪಿ.ಎಂ. ಶ್ರೀಧರನ್ ಮಾಸ್ತರ್, ಎನ್.ವಿ.ಪ್ರಜಿತ್ ಮಾಸ್ತರ್, ಎಸ್.ಆರ್. ಕಣ್ಣನ್ ಮೊದಲಾದವರು ಮಾತನಾಡಿದರು. ನೂತನ ಪದಾಧಿಕಾರಿಗಳಾಗಿ ಯು. ಪ್ರಭಾಕರನ್ (ಅಧ್ಯಕ್ಷ), ವಿ. ಶ್ರೀಕುಮಾರ್, ಪಿ.ಎಂ. ಶ್ರೀಧರನ್, ಕೆ.ವಿ.ಕೃಷ್ಣನ್ ಕುಟ್ಟಿ (ಉಪಾಧ್ಯಕ್ಷರು), ಪಿ. ಪ್ರಶೋಬ್ (ಪ್ರಧಾನ ಕಾರ್ಯದರ್ಶಿ), ಎನ್.ವಿ. ಪ್ರಜಿತ್, ಟಿ. ಪ್ರವೀಣ್ (ಕಾರ್ಯ ದರ್ಶಿಗಳು), ಎ. ರಾಧಾಕೃಷ್ಣನ್ (ಕೋಶಾಧಿಕಾರಿ), ಜಯಶ್ರೀ ಗೋಪಿಕೃಷ್ಣನ್ (ಭಗಿನಿ ಪ್ರಮುಖ್), ಕೆ.ಕೆ.ಸುಬಗ, ಅಶ್ವತಿ ರಾಕೇಶ್ (ಸಹಭಗಿನಿ ಪ್ರಮುಖರು) ಎಂಬಿವರನ್ನು ಆರಿಸಲಾಯಿತು.
ವಿದ್ಯಾನಗರದ ಚಿನ್ಮಯ ತೇಜಸ್ ಆಡಿಟೋರಿಯಂನಲ್ಲಿ ಈ ತಿಂಗಳ ೧೦ರಿಂದ ಆರಂಭಗೊಂಡ ಸಮ್ಮೇಳನ ನಿನ್ನೆ ಸಂಜೆ ಧ್ವಜಾವರೋಹಣ ದೊಂದಿಗೆ ಸಮಾಪ್ತಿಗೊಂಡಿತು.






