ಸೂರ್ಲು ಶ್ರೀ ಗಣೇಶಮಂದಿರ  ನವೀಕರಣ ಸಮಿತಿ ರೂಪೀಕರಣ

ಕಾಸರಗೋಡು: ಸೂರ್ಲುಗಣೇಶ ಭಜನಾ ಮಂದಿರ ನವೀಕರಿಸಲು ನಿನ್ನೆ ಮಂದಿರದಲ್ಲಿ ಸೇರಿದ ಸಭೆಯಲ್ಲಿ ತೀರ್ಮಾನಿಸಲಾಯಿತು. ನವೀಕರಣ ಸಮಿತಿ ರೂಪೀಕರಣ ಸಭೆಯನ್ನು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು  ಆಸ್ರ ದೀಪ ಬೆಳಗಿಸಿ ಉದ್ಘಾಟಿಸಿದರು. ಮಂದಿರದ ಅಧ್ಯಕ್ಷ ಸೀತಾರಾಮ ಕೆ. ಅಧ್ಯಕ್ಷತೆ ವಹಿಸಿದರು. ರಾಮಣ್ಣ ಟೈಲರ್, ಉಮೇಶ ಶೆಟ್ಟಿ, ವಸಂತಕುಮಾರ್ ಉಪಸ್ಥಿತರಿದ್ದರು. ಶಂಕರ ಬೆಳ್ಳಿಗೆ ಪ್ರಾಸ್ತಾವಿಕ ಭಾಷಣ ಮಾಡಿದರು. ಕೆ. ಸುರೇಶ್ ಸೂರ್ಲು, ಕೃಷ್ಣಪ್ರಸಾದ್ ಕೋಟೆಕಣಿ, ನಿರಂಜನ ಮಂಗಳೂರು, ರಾಮಕೃಷ್ಣ ಕೆ.ಎಸ್. ಶುಭ ಹಾರೈಸಿದರು. ರಘುರಾಮ ಕೆ. ಸ್ವಾಗತಿಸಿ, ಎಂ. ಅಶೋಕ ರೈ ಸೂರ್ಲು ನಿರೂಪಿಸಿದರು. ಮಹಾಬಲ ರೈ ಸೂರ್ಲು ವಂದಿಸಿದರು. ನವೀಕರಣ ಸಮಿತಿಗೆ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ (ರಕ್ಷಾಧಿಕಾರಿ), ವಸಂತ ಪೈ ಬದಿಯಡ್ಕ (ಗೌರವ ಅಧ್ಯಕ್ಷ), ಸುರೇಶ್ ಕೆ. ಸೂರ್ಲು (ಅಧ್ಯಕ್ಷ), ಕೃಷ್ಣ ಪ್ರಸಾದ್ ಕೋಟೆಕಣಿ (ಪ್ರಧಾನ ಕಾರ್ಯದರ್ಶಿ), ಅಶೋಕ ರೈ ಸೂರ್ಲು (ಕೋಶಾಧಿಕಾರಿ) ಹಾಗೂ ೨೫೧ ಜನರÀÄ ಒಳಗೊಂಡ ಸಮಿತಿಯನ್ನು ರೂಪೀಕರಿಸ ಲಾಯಿತು. ಮಂದಿರದಲ್ಲಿ ಮೃತ್ಯುಂಜಯ ಹೋಮ, ಅನ್ನ ಸಂತರ್ಪಣೆ ನಡೆಯಿತು.

RELATED NEWS

You cannot copy contents of this page