ಸೀತಾಂಗೋಳಿ: ಬೇಳ ಪಬ್ಲಿಕ್ ವೆಲ್ಫೇರ್ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ಥೋಮಸ್ ಡಿಸೋಜ ಹಾಗೂ ಉಪಾಧ್ಯಕ್ಷರಾಗಿ ರಿಚರ್ಡ್ ಕ್ರಾಸ್ತ ಅವಿರೋಧವಾಗಿ ಆಯ್ಕೆಯಾದರು. ಸ್ಟ್ಯಾನಿಲೋಬೊ, ಥೋಮಸ್ ಡಿಸೋಜಾ ಅಳಕೆ, ಜೋರ್ಜ್ ಡಿಸೋಜ, ಜೋರ್ಜ್ ಡಿ ಅಲ್ಮೇಡ, ಮಾರ್ಶೆಲ್ ರೋಡ್ರಿಗಸ್, ಡಾಲ್ಫಿ ಡಿಸೋಜ, ಪಿಯಾದ್ ಕ್ರಾಸ್ತ, ಬೇಬಿ ಜಯಶ್ರೀ ಮೊಂತೇರೊ, ಮರಿಯಾ ಗೊರೆಟ್ಟಿ ಕ್ರಾಸ್ತ, ಜುವನ್ನ ಸುವಾರಿಸ್, ವಿಜಯ ಕುಮಾರಿ ನಿರ್ದೇಶಕರಾಗಿ ಆಯ್ಕೆಗೊಂಡರು. ಥೋಮಸ್ ಡಿಸೋಜ ಹಾಗೂ ರಿಚರ್ಡ್ ಕ್ರಾಸ್ತರ ನಾಯಕತ್ವದಲ್ಲಿ ಬೇಳ ಪಬ್ಲಿಕ್ ವೆಲ್ಫೇರ್ ಸಹಕಾರಿ ಸಂಘ ಇನ್ನಷ್ಟು ಪ್ರಗತಿ, ಏಕತೆಯಿಂದ ಮುನ್ನಡೆಯಲಿ ಎಂದು ಸದಸ್ಯರು ಶುಭ ಹಾರೈಸಿದರು.





