ಕುಂಬಳೆ: ಆರನೇ ತರಗತಿ ವಿದ್ಯಾರ್ಥಿನಿಯನ್ನು ದೂಡಿಹಾಕಿ ಕೈಯ ಎಲುಬು ಮುರಿದ ಪ್ರಕರಣಕ್ಕೆ ಸಂಬಂಧಿಸಿ ಯುವತಿ ವಿರುದ್ಧ ಕುಂಬಳೆ ಪೊಲೀಸರು ಜಾಮೀನು ರಹಿತ ಕೇಸು ದಾಖಲಿಸಿಕೊಂಡಿದ್ದಾರೆ.
ಶೇಡಿಕಾವು ನಿವಾಸಿಯಾದ 11ರ ಹರೆಯದ ಬಾಲಕಿ ನೀಡಿದ ದೂರಿನಂತೆ ಕಣಿಪುರ ಕ್ಷೇತ್ರ ಸಮೀಪದ ಓರ್ವೆ ಯುವತಿ ವಿರುದ್ಧ ಕೇಸು ದಾಖಲಿಸ ಲಾಗಿದೆ. ಶುಕ್ರವಾರ ಸಂಜೆ 5 ಗಂಟೆ ವೇಳೆ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಶಾಲೆಯ ತರಗತಿ ಮುಗಿದು ಕಣಿಪುರ ಕ್ಷೇತ್ರ ಸಮೀಪದ ಟ್ಯೂಶನ್ ಅಧ್ಯಾಪಿಕೆಯ ಮನೆಗೆ ಟ್ಯೂಶನ್ಗಾಗಿ ವಿದ್ಯಾರ್ಥಿನಿ ತೆರಳುತ್ತಿದ್ದಳು. ಈ ಮಧ್ಯೆ ಯುವತಿ ದಾರಿಮಧ್ಯೆ ವಿದ್ಯಾರ್ಥಿ ನಿಯನ್ನು ತಡೆದು ನಿಲ್ಲಿಸಿ ನೀನು ಟ್ಯೂಶನ್ಗೆ ಹೋಗಕೂಡ ದೆಂದೂ, ಹೋದರೆ ಕಾಲು ಮುರಿಯುವೆನೆಂದು ಬೆದರಿಕೆಯೊಡ್ಡಿ ದೂಡಿಹಾಕಿದ್ದಳೆ ನ್ನಲಾಗಿದೆ. ಈ ವೇಳೆ ಗೇಟ್ನ ಮೇಲೆ ಬಿದ್ದ ವಿದ್ಯಾರ್ಥಿನಿಯ ಬಲಕೈಯ ಎಲುಬು ಬಿರುಕುಬಿಟ್ಟಿರುವುದಾಗಿ ಕುಂಬಳೆ ಪೊಲೀಸರು ದಾಖಲಿಸಿ ಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ಆರೋಪಿಯನ್ನು ಪತ್ತೆಹಚ್ಚಲು ತನಿಖೆ ತೀವ್ರಗೊಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಟ್ಯೂಶನ್ ಅಧ್ಯಾಪಿಕೆ ಯೊಂದಿಗೆ ನೆರೆಮನೆ ನಿವಾಸಿಯಾದ ಯುವತಿಗಿ ರುವ ದ್ವೇಷವೇ ಘಟನೆಗೆ ಕಾರಣವೆಂದು ಹೇಳಲಾಗುತ್ತಿದೆ.





