ಕಾಸರಗೋಡು: ಹೊಟ್ಟೆನೋವಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಮಧ್ಯೆ ವ್ಯಕ್ತಿ ಮೃತಪಟ್ಟರು. ಮೇಲ್ಪರಂಬ ಮರವಯಲ್ ನಿವಾಸಿ ರವಿ (55) ಮೃತಪಟ್ಟವರು. ನಿನ್ನೆ ಬೆಳಿಗ್ಗೆ ಘಟನೆ ನಡೆದಿದೆ. ಮಕ್ಕೇರಿ ಗುಳಿಗ ದೈವಸ್ಥಾನದ ಪೂಜಾರಿಯಾಗಿದ್ದರು. ಮೃತರು ಪತ್ನಿ ಪ್ರಿಯ, ಮಕ್ಕಳಾದ ಪ್ರಸೀತ, ಪ್ರವೀಣ, ಪ್ರವೀಣ್, ಪ್ರಣಯ, ಅಳಿಯ ವಿಪಿನ್, ಸಹೋದರ ಸುರೇಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಹೋದರಿ ಬೇಬಿ ಈ ಹಿಂದೆ ನಿಧನ ಹೊಂದಿದ್ದಾರೆ.






