ಉಪ್ಪಳ: ದಂಪತಿ ಕ್ಷೇತ್ರ ದರ್ಶನಕ್ಕೆ ಹಾಗೂ ಮಕ್ಕಳು ಶಾಲೆ,ಕಾಲೇಜಿಗೆ ಹೋದ ಸಮಯದಲ್ಲಿ ಮನೆಯಿಂದ 110 ಗ್ರಾಂ ಚಿನ್ನಾಭರಣ ಮತ್ತು 20 ಸಾವಿರ ರೂಪಾಯಿ ಕಳವಿಗೀಡಾದ ಬಗ್ಗೆ ದೂರಲಾಗಿದೆ. ಪೈವಳಿಕೆ ಕುರುಡಪದ ವಿನ ಸುಬ್ರಾಯ ಸಾಯ ಎಂಬವರ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
2026 ಮಾರ್ಚ್ 9ರಿಂದ 23ರ ಮಧ್ಯೆಗಿನ ದಿನಗಳಲ್ಲಿ ಕಳವು ನಡೆದಿರುವುದಾಗಿ ಸಂಶಯಿಸಲಾ ಗುತ್ತಿದೆ. ಸುಬ್ರಾಯ ಹಾಗೂ ಪತ್ನಿ ಮಾರ್ಚ್ ೯ರಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದರ್ಶನಕ್ಕಾಗಿ ತೆರಳಿದ್ದರು. ಈ ವೇಳೆ ಮನೆಯಲ್ಲಿ ಮಕ್ಕಳು ಮಾತ್ರವೇ ಇದ್ದರು. ಹಿರಿಯ ಮಗ ಕಾಲೇಜಿಗೆ ಹಾಗೂ ಕಿರಿಯ ಮಕ್ಕಳು ಪೈವಳಿಕೆ ಶಾಲೆಗೆ ತೆರಳಿದ್ದರು. ಈ ಹೊತ್ತಿನಲ್ಲಿ ಮನೆಯ ಹೊರಗೆ ಕೀಲಿಕೈ ಇರಿಸಿದ್ದರು. ಅಲ್ಲಿಂದ ಕೀಲಿ ಕೈ ತೆಗೆದ ಕಳ್ಳರು ಮನೆಯ ಬಾಗಿಲು ತೆರೆದು ಒಳಗೆ ನುಗ್ಗಿ ಕಪಾಟಿನಲ್ಲಿದ್ದ ವಜ್ರದ ನೆಕ್ಲೇಸ್, ಚಿನ್ನದ ಬಳೆ, ಬೆಂಡೋಲೆ, ಉಂಗುರ, ಮಾಲೆ ಮೊದಲಾದವು ಗಳನ್ನು ಹಾಗೂ ೨೦ ಸಾವಿರ ರೂಪಾ ಯಿಗಳನ್ನು ಕಳವು ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಇದೇ ವೇಳೆ ಕಳವಿಗೆ ಸಂಬಂಧಿಸಿ ಸ್ಥಳೀಯ ವ್ಯಕ್ತಿ ಯೋರ್ವನ ಮೇಲೆ ಸಂಶಯವಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.






