ಜಿಲ್ಲೆಯ ಅತ್ಯಂತ ಹಿರಿಯ ಮತದಾರ ಎಂಕಪ್ಪು ನಾಯ್ಕ್ ನಿಧನ

ಕಾಸರಗೋಡು: ಜಿಲ್ಲೆಯ ಅತ್ಯಂತ ಹೆಚ್ಚು ಪ್ರಾಯದ ಮತದಾರರಾದ ಪನತ್ತಡಿಯ ಶತಾಯುಷಿ ಎಂಕಪ್ಪು ನಾಯ್ಕ್ (107) ನಿಧನ ಹೊಂದಿದರು. ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಸಕ್ರಿಯರಾಗಿ ಭಾಗವಹಿಸಿ ಇವರು ಗಮನ ಸೆಳೆದಿದ್ದರು. ಚುನಾವಣಾ ಆಯೋಗ ಏರ್ಪಡಿಸಿದ ‘ಮನೆಯಲ್ಲಿ ಮತ’ ವ್ಯವಸ್ಥೆಯನ್ನು ಉಪಯೋಗಿಸಿಕೊಂಡು ತನ್ನ ಮತದಾನ ಹಕ್ಕನ್ನು ವಿನಿಯೋಗಿಸಿದ್ದರು. ಜಿಲ್ಲಾಧಿಕಾರಿ ಇವರನ್ನು ಗೌರವಿಸಿದ್ದರು. ಪನತ್ತಡಿಯ ಉತ್ತಮ ಕೃಷಿಕನಾಗಿಯೂ ಆಯ್ಕೆಯಾಗಿದ್ದರು. ನಿನ್ನೆ ಬೆಳಿಗ್ಗೆ ಮನೆ ಹಿತ್ತಿಲಲ್ಲಿ ಅಂತ್ಯ ಸಂಸ್ಕಾರ ನಡೆದಿದೆ.

ಇವರ ಪತ್ನಿ ಅಕ್ಕುಬಾಯಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ತಿಮ್ಮು ನಾಯ್ಕ್, ಸುಂದರ, ಅಪ್ಪಯ್ಯ, ರಾಧಾಮಣಿ, ಸರೋಜಿನಿ, ಕೇಶವ (ನಿವೃತ್ತ ಲೇಬರ್ ಆಫೀಸರ್), ಕೆ. ಬಾಲಕೃಷ್ಣನ್ (ನಿವೃತ್ತ ಪಂಚಾಯತ್ ಕಾರ್ಯದರ್ಶಿ), ಕುಮಾರಿ, ಶ್ರೀಧರನ್, ಅಳಿಯಂದಿರಾದ ಚೋಮಣ್ಣ ನಾಯ್ಕ್, ಕೇಶವ, ಕೇಶವ ಕಡಮಲ, ಸೊಸೆಯಂದಿರಾದ ಮೀನಾಕ್ಷಿ, ದೇವಕಿ, ಶಾರದ, ಪದ್ಮಾವತಿ, ಗೀತಾಲಕ್ಷ್ಮಿ, ಮಮತ, ಜ್ಯೋತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಪುತ್ರ ಗೋವಿಂದ ಈ ಹಿಂದೆ ನಿಧನರಾಗಿದ್ದಾರೆ.

RELATED NEWS

You cannot copy contents of this page