ಪೈವಳಿಕೆ: ಚಿಪ್ಪಾರುಗುತ್ತು ಸೊಣಾಜೆ ನಿವಾಸಿ ರವೀಂದ್ರ ರೈ (62) ಮಂಗಳವಾರ ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕೃಷಿಕರಾಗಿದ್ದು, ಬಾಯಾರುಪದವು ವಿಶ್ವ ಮೆಡಿಕಲ್‌ನಲ್ಲಿ ಹಲವಾರು ವರ್ಷಗಳಿಂದ ನೌಕರನಾಗಿದ್ದು ಎಲ್ಲರಿಗೂ ಚಿರಪರಿಚಿತರಾಗಿದ್ದರು. ಮೃತರು ತಾಯಿ ಅಕ್ಕಮ್ಮ, ಪತ್ನಿ ಶಶಿಕಲಾ, ಮಕ್ಕಳಾದ ನಿಶಾನ್, ಶರವಿ, ಸಹೋದರಿಯರಾದ ಮನೋರಮ ಶೆಟ್ಟಿ ಕುರಿಯ, ಪ್ರಭಾವತಿ ರೈ ತೊಟ್ಲ, ಸುಧಾ ರೈ, ಸರಸ್ವತಿ ಹಾಗೂ ಅಪಾರ ಬಂಧು -ಬಳಗವನ್ನು ಅಗಲಿದ್ದಾರೆ. ಮನೆಗೆ ಪೈವಳಿಕೆ ಪಂಚಾಯತ್ ಸದಸ್ಯೆ ಯಶೋದ, ಬ್ಲೋಕ್ ಪಂಚಾಯತ್ ಸದಸ್ಯೆ ಚಂದ್ರಾವತಿ ಶೆಟ್ಟಿ, ಫಾರೂಕ್ ಪಲ್ಲಕೂಡೆಲ್ ಭೇಟಿ ನೀಡಿ ಅಂತಿಮನಮನ ಸಲ್ಲಿಸಿದ್ದಾರೆ.







