ಮೀಂಜ: ಮೀಯಪದವು ನಿವಾಸಿ ದಂಬಯ್ಯ ಮೂಲ್ಯ(70) ನಿಧನಹೊಂದಿದರು. ಅಸೌಖ್ಯ ಬಾಧಿಸಿದ್ದ ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ಸಂಜೆ ನಿಧನ ಸಂಭವಿಸಿದೆ. ಇವರು ಈ ಹಿಂದೆ ಬಡಗಿ ವೃತ್ತಿ ನಿರ್ವಹಿಸುತ್ತಿದ್ದರು.
ಮೃತರು ಪತ್ನಿ ಸುಲೋಚನ, ಮಕ್ಕಳಾದ ಶಿವಪ್ರಸಾದ್, ಚೇತನ, ಅಳಿಯ ರಮೇಶ್, ಸೊಸೆ ವಿಮಲ, ಸಹೋದರ-ಸಹೋದರಿಯರಾದ ಬಾಬು, ಸುರೇಶ (ಮೀಯಪದವಿನಲ್ಲಿ ‘ಕಾರವಲ್’ ಏಜೆಂಟ್), ವಿಶಾಲಾಕ್ಷಿ, ಮಮತ, ಹರಿಣಿ, ಹರಿಣಾಕ್ಷಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಕೇಶವ ಎಂಬವರು ಈ ಹಿಂದೆ ನಿಧನರಾಗಿದ್ದಾರೆ.







