ಶಾಲೆಯಿಂದ ಅಕ್ಕಿ, ಪಾತ್ರೆಗಳ ಕಳವು: 180 ಮಕ್ಕಳಿಗೆ ಮಧ್ಯಾಹ್ನದೂಟ ಮೊಟಕು

ತೃಶೂರು: ಶಾಲೆಗೆ ನುಗ್ಗಿದ ಕಳ್ಳ ಮಕ್ಕಳಿಗೆ  ಮಧ್ಯಾಹ್ನದೂಟ ಕ್ಕಾಗಿರಿಸಿದ್ದ ಅಕ್ಕಿ ಹಾಗೂ ಪಾತ್ರೆಗಳ ಸಹಿತ ಸಾಮಗ್ರಿಗಳನ್ನು ಲಪಟಾಯಿಸಿದ್ದಾನೆ. ಇದರಿಂದಾಗಿ 180ರಷ್ಟು ಮಕ್ಕಳ ಮಧ್ಯಾಹ್ನದೂಟ ಮೊಟಕುಗೊಂಡಿತು. ಕೊಡುಂಗಲ್ಲೂರು ಕೋತಪರಂಬ್ ವಾಸುದೇವ ವಿಳಾಸ ಎಲ್‌ಪಿ ಶಾಲೆಯಲ್ಲಿ ಕಳವು ನಡೆದಿದೆ.

ನಿನ್ನೆ ಬೆಳಿಗ್ಗೆ ನೌಕರರು ತಲುಪಿದಾಗ ಕಳವಿನ ಬಗ್ಗೆ ತಿಳಿದು ಬಂದಿದೆ. ಬಾಗಿಲನ್ನು ಮುರಿದು ಒಳನುಗ್ಗಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಶಾಲೆಗೆ ಹೊಂದಿಕೊಂಡಿರುವ ಅಡುಗೆ ಕೊಠಡಿ, ಸ್ಟೋರ್ ರೂಮ್ ಬಾಗಿಲನ್ನು ಕೂಡಾ ಮುರಿದಿದ್ದು, ಐದು ಕಿಲೋ ಅಕ್ಕಿ, ಪದಾರ್ಥಕ್ಕಿರುವ ಮಸಾಲೆಗಳು, ಪಾತ್ರೆಗಳು, ಮಿಕ್ಸಿ ಎಂಬಿವುಗಳನ್ನು ಕಳವು ನಡೆಸಲಾಗಿದೆ. ಇದರಿಂದಾಗಿ ಮಕ್ಕಳ ನಿನ್ನೆಯ ಮಧ್ಯಾಹ್ನದೂಟಕ್ಕೆ ತೊಂದರೆಯಾಯಿತು. ಶಾಲಾ ಅಧಿಕಾರಿಗಳು ನೀಡಿದ ದೂರಿನಂತೆ ಮದಿಲಗಂ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ.

You cannot copy contents of this page