ಕಾಸರಗೋಡು ಸರಕಾರಿ ಕಾಲೇಜಿನಲ್ಲಿ : ರ‍್ಯಾಗಿಂಗ್: 13 ವಿದ್ಯಾರ್ಥಿಗಳ ಅಮಾನತು

ಕಾಸರಗೋಡು: ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷ  ಪದವಿ ವಿದ್ಯಾರ್ಥಿಯನ್ನು   ರ‍್ಯಾಗಿಂಗ್ ಗೊಳಪಡಿಸಿದ ಆರೋಪದಂತೆ  ದ್ವಿತೀಯ ಮತ್ತು ತೃತೀಯ ವರ್ಷದ ಪದವಿ ವಿದ್ಯಾರ್ಥಿಗಳಾದ 13 ಮಂದಿಯನ್ನು ತನಿಖಾ ವಿಧೇಯ ಗೊಳಿಸಿ ಪ್ರಾಂಶುಪಾಲ ವಿ.ಎಸ್. ಅನಿಲ್ ಕುಮಾರ್ ಅಮಾನತುಮಾ ಡಿದ್ದಾರೆ.  ಜುಲೈ 13ರಂದು ಕಾಲೇಜು ಕ್ಯಾಂಪಸ್‌ನಲ್ಲಿ ತಂಡವೊಂದು ಪ್ರಥಮವರ್ಷ ಪದವಿ ವಿದ್ಯಾರ್ಥಿಯನ್ನು  ತಡೆದು ನಿಲ್ಲಿಸಿ ಬೆದರಿಕೆಯೊಡ್ಡಿ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಘಟನೆ ಬಗ್ಗೆ ವಿದ್ಯಾರ್ಥಿ ರಕ್ಷಕರಲ್ಲಿ ತಿಳಿಸಿದ್ದು, ಅನಂತರ ಕಾಲೇಜಿನ ಪ್ರಾಂಶುಪಾ ಲರಿಗೆ ದೂರು ನೀಡಲಾಗಿತ್ತು. ಕಾಲೇಜು ಅಧಿಕಾರಿಗಳು ಪ್ರಾಥಮಿಕ ತನಿಖೆಯ ಆಧಾರದಲ್ಲಿ ಆರೋಪಕ್ಕೆ ಡೆಯಾದ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ರ‍್ಯಾಗಿಂಗ್ ಗೊಳಗಾದ ವಿದ್ಯಾರ್ಥಿ ಪ್ರಾಂಶುಪಾ ಲರಿಗೆ ನೀಡಿದ ದೂರಿನಂತೆ ಗುರುವಾರ ನಡೆದ ಆಂಟಿ ರ‍್ಯಾಗಿಂಗ್ ಸೆಲ್ ಸಭೆ ದೂರನ್ನು ಪರಿಶೀಲಿಸಿ  ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಿತ್ತು.  ರ‍್ಯಾಗಿಂಗ್‌ಗೊಳಗಾದ ವಿದ್ಯಾರ್ಥಿ ಪೊಲೀಸರಿಗೂ ದೂರು ನೀಡಿದ್ದಾನೆ.

ಕಳೆದ ವರ್ಷ ಕಾಲೇಜಿನಲ್ಲಿ ಶಿಸ್ತುಕ್ರಮಕ್ಕೊಳಗಾದ ವಿದ್ಯಾರ್ಥಿ ಸಹಿತ ನಾಲ್ಕು ಮಂದಿ ಹೊರಗಿನಿಂದ ತಲುಪಿ ರ‍್ಯಾಗಿಂಗ್ ನಡೆಸಿರುವುದಾ ಗಿಯೂ ದೂರಿನಲ್ಲಿ ತಿಳಿಸಲಾಗಿದೆ. ವಿದ್ಯಾರ್ಥಿಯ ಹೇಳಿಕೆ ದಾಖಲಿಸಿ ತನಿಖೆ ನಡೆಸಲಾಗು ವುದೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page