ರಬ್ಬರ್ ಶೀಟ್ ಯಂತ್ರ ಕಳವು: ಓರ್ವ ಸೆರೆ

ಬದಿಯಡ್ಕ: ಶೇಣಿ ಏಳ್ಕಾನದಿಂದ ರಬ್ಬರ್ ಶೀಟ್ ಯಂತ್ರ ಕಳವುಗೈದ ಪ್ರಕರಣದಲ್ಲಿ ಓರ್ವ ಸೆರೆಗೀಡಾಗಿದ್ದಾನೆ. ಪುತ್ತಿಗೆ ಬಾಡೂರುಪಳ್ಳ ಕೋಟ ನಿವಾಸಿ ಮುಹಮ್ಮದ್ ಇಶಾಕ್ (19) ಎಂಬಾತನನ್ನು ಬದಿಯಡ್ಕ ಇನ್‌ಸ್ಪೆಕ್ಟರ್ ಆರ್.ಪಿ. ಅನೂಪ್ ಕೃಷ್ಣನ್ ನೇತೃತ್ವದಲ್ಲಿ ಬಂಧಿಸಲಾ ಗಿದೆ. ಪ್ರಾಯಪೂರ್ತಿ ಯಾಗದ ಇಬ್ಬರ ಸಹಾಯದೊಂದಿಗೆ ಈತ 600 ಕಿಲೋ ತೂಕದ ರಬ್ಬರ್ ರೋಲರ್ ಯಂತ್ರವನ್ನು ಕಳವುಗೈದಿ ರುವುದಾಗಿ ದೂರಲಾಗಿದೆ. ಕನ್ನಾಟಿಕಾ ನದ ಸೋಜನ್ ಜೋರ್ಜ್ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಜೂನ್ 22ರಿಂದ   28ರ ಮಧ್ಯೆಗಿನ ದಿನಗಳಲ್ಲಿ  ಪಿ.ವಿ ರಬ್ಬರ್ಸ್ ಎಂಬ ವ್ಯಾಪಾರ ಸಂಸ್ಥೆಯಿಂದ ಯಂತ್ರವನ್ನು ಕಳವುಗೈಯ್ಯಲಾಗಿದೆ. ಎಸ್.ಐ ರೂಪೇಶ್, ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಪಿ.ಕೆ. ಪ್ರಸಾದ್, ಗೋಕುಲ್, ಶ್ರೀನೇಶ್ ಎಂಬಿವರು ಒಳಗೊಂಡ ತಂಡ ಆರೋಪಿಯನ್ನು ಬಂಧಿಸಿದೆ.

You cannot copy contents of this page