ಮಿತಿಮೀರಿದ ಬೀದಿನಾಯಿಗಳ ಕಾಟ : ಶಾಲೆ ಮಕ್ಕಳ ಸಂಚಾರಕ್ಕೂ ಭೀತಿ

ಉಪ್ಪಳ: ಬೀದಿ ನಾಯಿಗಳ ಕಾಟ ಮಿತಿಮೀರಿರುವುದಾಗಿ ಸ್ಥಳೀಯರು ದೂರಿದ್ದಾರೆ. ಉಪ್ಪಳ ಪೇಟೆ ಹಾಗೂ ಒಳ ಪ್ರದೇಶದಲ್ಲಿ ದಿನನಿತ್ಯ ಬೀದಿ ನಾಯಿಗಳು ಹಿಂಡುಹಿಂಡಾಗಿ ಅಲೆದಾಡುತ್ತಿದ್ದು, ಸಾರ್ವಜನಿಕರಿಗೆ ಭೀತಿಯೊಡ್ಡುತ್ತಿವೆ. ಪತ್ವಾಡಿ ರಸ್ತೆಯ ಮಜಲು ಎಂಬಲ್ಲಿ ಹಲವಾರು ದಿನಗಳಿಂದ 15ರಷ್ಟು ಬೀದಿನಾಯಿಗಳು ಸವಾರಿ ನಡೆಸುತ್ತಿವೆ. ಈ ಪರಿಸರದಲ್ಲಿ ದಿನನಿತ್ಯ ಶಾಲಾ, ಕಾಲೇಜು, ಮದ್ರಸಗಳಿಗೆ ಮಕ್ಕಳು ಸಹಿತ ಹಲವಾರು ಮಂದಿ ನಡೆದುಕೊಂಡು ಹೋಗುತ್ತಿದ್ದಾರೆ. ಅಲ್ಲದೆ ವಾಹನ ಸವಾರರನ್ನು ಕೂಡಾ ಇವು ಬೆನ್ನಟ್ಟುತ್ತಿವೆ. ಈ ಪರಿಸರದ ರಸ್ತೆ ಬದಿಯಲ್ಲಿ ರಾತ್ರಿ ಹೊತ್ತು ತ್ಯಾಜ್ಯಗಳನ್ನು ತಂದೆಸೆಯುತ್ತಿದ್ದು, ಇದನ್ನು ತಿನ್ನಲು ನಾಯಿ ಗಳು ತಲುಪುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಪಂ. ಅಧಿಕಾರಿಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ   ಹಾಗೂ ತ್ಯಾಜ್ಯ ಉಪೇಕ್ಷಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

RELATED NEWS

You cannot copy contents of this page