ಕುಂಬಳೆ: ಕುಂಬಳೆಯ ಮುಸ್ಲಿಂಲೀಗ್‌ನ ಸಕ್ರಿಯ ಕಾರ್ಯಕರ್ತ ಎರಿಯಾಲ್ ಬಾರ್ಕೋಡ್ ನಿವಾಸಿ ಅಲಿ (43) ಕುಸಿದು ಬಿದ್ದು ಮೃತಪಟ್ಟರು. ನಿನ್ನೆ ರಾತ್ರಿ 10.30ರ ವೇಳೆ ಮನೆಯಲ್ಲಿ ಕುಸಿದು ಬಿದ್ದ ಇವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಇಂದು ಮಧ್ಯಾಹ್ನ ತಳಂಗರೆ ಮಾಲೀಕ್ ದೀನಾರ್ ಜುಮಾ ಮಸೀದಿ ಅಂಗಣದಲ್ಲಿ ಅಂತ್ಯಕ್ರಿಯೆ ನಡೆಯಿತು. ಮುಸ್ಲಿಂ ಲೀಗ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ಅಬ್ದುಲ್ ರಹ್ಮಾನ್‌ರ ಸಹೋದರನಾಗಿದ್ದಾರೆ.
ದಿ| ಅಬ್ದುಲ್ಲ- ಆಯಿಷಾ ದಂಪತಿ ಪುತ್ರನಾಗಿದ್ದು, ಮೊನುದ್ದೀನ್ ಇನ್ನೋರ್ವ ಸಹೋದರನಾಗಿದ್ದಾರೆ.







