ಬಾಯಾರು: ಗುಡ್ಡೆ ಕುಸಿದು ಬಿದ್ದು ಸಂಚಾರಕ್ಕೆ ಅಡಚಣೆ

ಬಾಯಾರು: ಗುಡ್ಡೆ ಕುಸಿದು ಬಿದ್ದು ರಸ್ತೆಯಲ್ಲಿ ಸಂಚಾರ ಮೊಟಕುಗೊಂಡ ಘಟನೆ ನಡೆದಿದೆ. ಪೈವಳಿಕೆ ಪಂಚಾಯತ್‌ನ ೧೦ನೇ ವಾರ್ಡಿನ ಧರ್ಮತ್ತಡ್ಕ-ಕನಿಯಾಲ ಕಂಪದಮೂಲೆ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ಪರಿಸರದಲ್ಲಿ ಗುಡ್ಡೆ ಸಹಿತ ಮರಗಳು ಹಾಗೂ ಗದ್ದೆ ಬದಿಯ ಮಣ್ಣು ನಿನ್ನೆ ಮಧ್ಯಾಹ್ನ ಕುಸಿದು ರಸ್ತೆಗೆ ಬಿದ್ದಿದೆ. ಈ ವೇಳೆ ವಾಹನ ಹಾಗೂ ಜನರ ಸಂಚಾರ ಇಲ್ಲದಿದ್ದರಿಂದ ಅಪಾಯ ತಪ್ಪಿದೆ. ರಸ್ತೆಗೆ ಬಿದ್ದ ಮಣ್ಣನ್ನು ಜೆಸಿಬಿ ಮೂಲಕ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಸ್ಥಳಕ್ಕೆ ಪಂಚಾಯತ್ ಕಾರ್ಯದರ್ಶಿ, ಪೈವಳಿಕೆ ಪಂಚಾಯತ್ ಸದಸ್ಯರಾದ ಗಣೇಶ್ ನಾಯ್ಕ್, ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ, ಹಿರಿಯರಾದ ಬಿ.ಕೆ ಬಲ್ಲಾಳ್ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಪಂಚಾಯತ್ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ಊರವರು ಒತ್ತಾಯಿಸಿದ್ದಾರೆ.

RELATED NEWS

You cannot copy contents of this page