ಮಂಜೇಶ್ವರ: ಉದ್ಯಾವರಮಾಡ ದಲ್ಲಿರುವ ಶ್ರೀ ಅರಸುಕೃಪಾ ಜೈ ವೀರಮಾರುತಿ ವ್ಯಾಯಾಮ ಶಾಲೆಯಿಂದ ಕಾಣಿಕೆಹುಂಡಿ ಕಳವುಗೈದ ಪ್ರಕರಣದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ತಲುಪಿ ಪರಿಶೀಲನೆ ನಡೆಸಿದೆ. ವ್ಯಾಯಾಮ ಶಾಲೆಯ ಸಿಸಿ ಕ್ಯಾಮರಾದಲ್ಲಿ ಸೆರೆ ಯಾದ ವ್ಯಕ್ತಿಯನ್ನು ಕೇಂದ್ರೀಕರಿಸಿ ತನಿಖೆ ನಡೆಯುತ್ತಿದೆ ಯೆಂದು ಪೊಲೀಸರು ತಿಳಿಸಿದ್ದಾರೆ.
ಈ ತಿಂಗಳ 17ರಂದು ರಾತ್ರಿ ವ್ಯಾಯಾಮ ಶಾಲೆಯಿಂದ ಕಳವು ನಡೆದಿದೆ. ವ್ಯಾಯಾಮ ಶಾಲೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಅಲ್ಲಿನ ಕಾಣಿಕೆಹುಂಡಿಯಲ್ಲಿದ್ದ ಹಣವನ್ನು ದೋಚಿದ್ದಾರೆ. ಹುಂಡಿಯ ಪಾತ್ರೆ ವ್ಯಾಯಾಮ ಶಾಲೆ ಸಮೀಪದ ಪೊದೆಗಳಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ದೂರು ಲಭಿಸಿದ ಪೊಲೀಸರು ಸ್ಥಳಕ್ಕೆ ತಲುಪಿ ತಪಾಸಣೆ ನಡೆಸಿದ್ದಾರೆ. ವ್ಯಾಯಾಮ ಶಾಲೆಯ ಸಿಸಿ ಟಿವಿ ಕ್ಯಾಮರಾವನ್ನು ಪರಿಶೀಲಿಸಿದಾಗ ಅದರಲ್ಲಿ ವ್ಯಕ್ತಿಯೋ ರ್ವನ ದೃಶ್ಯ ಪತ್ತೆಯಾ ಗಿದೆ. ಆ ವ್ಯಕ್ತಿಯನ್ನು ಕೇಂದ್ರೀ ಕರಿಸಿ ತನಿಖೆ ನಡೆಯುತ್ತಿರು ವುದಾಗಿ ಪೊಲೀಸರು ತಿಳಿಸಿದ್ದಾರೆ.






