ವಾಹನ ತಪಾಸಣೆ ವೇಳೆ ಪೊಲೀಸರನ್ನು ಕಡಿದು ಕೊಲೆಗೈಯ್ಯಲು ಯತ್ನ: ನೆಕ್ರಾಜೆ, ಕಲ್ಲೂರಾವಿ ನಿವಾಸಿಗಳು ಸೆರೆ

ಕಾಸರಗೋಡು: ನಗರದ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಮಧ್ಯೆ ಪೊಲೀಸರನ್ನು ಕಡಿದು ಕೊಲ್ಲಲು ಯತ್ನ ನಡೆದಿದೆ. ಘಟನೆಯಲ್ಲಿ ನರಹತ್ಯಾ ಯತ್ನಕ್ಕೆ ಕೇಸು ದಾಖಲಿಸಿದ ಪೊಲೀಸರು ಮೂರು ಮಂದಿಯನ್ನು ಬಂಧಿಸಿದ್ದಾರೆ.

ಬದಿಯಡ್ಕ, ನೆಕ್ರಾಜೆ ನಿವಾಸಿ ಗಳಾದ ಸಫ್ವಾನ್, ಅಮೀರ್, ಕಾಞಂಗಾಡ್ ಕಲ್ಲೂರಾವಿಯ ಮುಹಮ್ಮದ್ ಶಮೀನ್ ಎಂಬವರನ್ನು ಬಂಧಿಸಲಾಗಿದೆ. ಎ.ಆರ್ ಕ್ಯಾಂಪ್‌ನ ಪೊಲೀಸ್ ಸಂದೀಪ್‌ರಿಗೆ ಗಾಯವುಂ ಟಾಗಿದೆ. ಇಂದು ಮುಂಜಾನೆ 1.30ರ ವೇಳೆ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಅಕ್ರಮ ಘಟನೆ ನಡೆದಿದೆ. ಕಂಟ್ರೋಲ್ ರೂಂ ಎಸ್‌ಐಯ ನೇತೃತ್ವದಲ್ಲಿ ತಂಡ ವಾಹನ ತಪಾಸಣೆ ನಡೆಸುತ್ತಿತ್ತು. ಈ ಮಧ್ಯೆ ಕರಂದಕ್ಕಾಡ್ ಭಾಗದಿಂದ ಬೈಕ್‌ನಲ್ಲಿ ಮೂರು ಮಂದಿಯ ತಂಡ ತಲುಪಿದೆ. ಬೈಕ್ ಸವಾರರು ಹೆಲ್ಮೆಟ್ ಧರಿಸಿರಲಿ ಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಬೈಕನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದ ಮಧ್ಯೆ ಸವಾರರು ಪೊಲೀಸರಲ್ಲಿ ವಾಗ್ವಾದಕ್ಕೆ ಮುಂದಾಗಿ ದ್ದಾರೆ. ಈ ಮಧ್ಯೆ ಹಲ್ಲೆಗೈಯ್ಯಲು ಯತ್ನ ಉಂಟಾದಾಗ ಸಂದೀಪ್ ತಡೆಯಲು ಯತ್ನಿಸಿದ್ದು, ಈ ಸಮಯದಲ್ಲಿ ಸವಾರರಲ್ಲಿ ಓರ್ವ ಕತ್ತಿ ತೆಗೆದು ಕುತ್ತಿಗೆಗೆ ಕಡಿಯಲು ಯತ್ನಿಸಿದ್ದಾನೆಂದು ಕಾಸರಗೋಡು ನಗರ ಠಾಣೆ ಪೊಲೀಸರು ನೋಂದಾಯಿಸಿದ ಕೇಸಿನಲ್ಲಿ ತಿಳಿಸಲಾಗಿದೆ. ಕುತ್ತಿಗೆಗೆ ಕಡಿಯುವುದನ್ನು ತಪ್ಪಿಸಲೆತ್ನಿಸುವ ಮಧ್ಯೆ ಸಂದೀಪ್‌ರ ಬಲಗೈಗೆ ಗಾಯವುಂಟಾಗಿದೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸರು ತಲುಪಿ ಮೂರು ಮಂದಿಯನ್ನು ಬಂಧಿಸಿದ್ದಾರೆ.

RELATED NEWS

You cannot copy contents of this page