ಉಪ್ಪಳ: ಬಿರುವೆರ್ ಕುಡ್ಲ ಮಂಜೇಶ್ವರ ತಾಲೂಕು ಘಟಕದ ಸದಸ್ಯ ಐತಪ್ಪ ಪೂಜಾರಿ ದೇರಂಬಳ ಇವರ ಪುತ್ರಿ ಸುಶ್ಮಿತಾ ಸೋಮವಾರ ಜೋಡುಕಲ್ಲುನಿಂದ ಸಹೋದರಿಯ ಜೊತೆ ಮನೆಗೆ ನಡೆದು ಹೋಗುತ್ತಿದ್ದ ವೇಳೆ ತಾತ್ಕಾಲಿಕ ಕಂಗಿನ ಸೇತುವೆ ಯಿಂದ ಆಯತಪ್ಪಿ ದೇರಂಬಳ ಹೊಳೆಗೆ ಬಿದ್ದಿದ್ದು, ಈಕೆಯನ್ನು ರಕ್ಷಿಸಿದ ಉದಯ ಕುಮಾರ್ ಶೆಟ್ಟಿಯವÀರ ಸಾಹಸವನ್ನು ಗುರುತಿಸಿ ಬಿರುವೆರ್ ಕುಡ್ಲ ಮಂಜೇಶ್ವರ ತಾಲೂಕು ಘಟಕದ ವತಿಯಿಂದ ನಿನ್ನೆ ಸಂಜೆ ಸುಶ್ಮಿತರ ಮನೆಯಲ್ಲಿ ಗೌರವಧನವನ್ನಿತ್ತು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ಗೌರವಾಧ್ಯಕ್ಷ ಶೀನಪ್ಪ ಪೂಜಾರಿ ಅಲಾರು, ಪ್ರಧಾನ ಕಾರ್ಯದರ್ಶಿ ಅನಿಲ್ ಪ್ರತಾಪನಗರ, ಸದಸ್ಯರಾದ ಆನಂದ ಬೀರಿಗುಡ್ಡೆ, ಹರಿಣಿ ಪ್ರತಾಪನಗರ, ಜಯಂತಿ ಉದಯ ಕುಮಾರ್ ಪೈವಳಿಕೆ ಭಾಗವಹಿಸಿದ್ದರು. ಹೊಳೆಗೆ ಸೇತುವೆ ನಿರ್ಮಿಸಬೇಕೆಂದು ಬಿರುವೆರ್ ಕುಡ್ಲ ಮಂಜೇಶ್ವರ ತಾಲೂಕು ಘಟಕ ಸರಕಾರವನ್ನು ಒತ್ತಾಯಿಸಿದೆ.







