ಹೊಟ್ಟೆಗೆ ವಿಷ ಸೇರಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತ್ಯು

ಕಾಸರಗೋಡು: ಬೇಡಗಂ ಪೊಲೀಸ್ ಠಾಣೆ ವ್ಯಾಪ್ತಿಯ  ತೋರೋತ್ತ್ ಎಂಬಲ್ಲಿ ಯುವತಿಯೋರ್ವೆ ಹೊಟ್ಟೆಗೆ ವಿಷ ಸೇರಿ ಮೃತಪಟ್ಟ ಘಟನೆ ನಡೆದಿದೆ.   ತೋರೋತ್ತ್‌ನ ಟಿ. ಅಶೋಕನ್‌ರ ಪುತ್ರಿ ಟಿ. ಅನಶ್ವರ (19) ಮೃತಪಟ್ಟ ಯುವತಿಯಾಗಿದ್ದಾಳೆ. ಮಂಗಳೂರಿನ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಚಿಕಿತ್ಸೆ ಮಧ್ಯೆ ನಿಧನ ಸಂಭವಿಸಿದೆ.   ಪ್ಲಸ್‌ಟು ಶಿಕ್ಷಣದ ಬಳಿಕ ಉನ್ನತ ಶಿಕ್ಷಣಕ್ಕೆ ಅನಶ್ವರ ಸಿದ್ಧತೆ ನಡೆಸುತ್ತಿದ್ದಳು. ನಿನ್ನೆ ಮುಂಜಾನೆ ೨ ಗಂಟೆ ವೇಳೆ ಹೊಟ್ಟೆನೋವು ಅನುಭವಗೊಂಡ ಹಿನ್ನೆಲೆಯಲ್ಲಿ ಈಕೆಯನ್ನು ಕುಂಡಂಗುಳಿಯ ಕ್ಲಿನಿಕ್‌ವೊಂದಕ್ಕೆ ತಲುಪಿಸಿ ಚಿಕಿತ್ಸೆ ನೀಡಲಾಯಿತು. ಅನಂತರ ಬೇಡಗಂ ತಾಲೂಕು ಆಸ್ಪತ್ರೆಗೂ ಅಲ್ಲಿಂದ ಚೆಂಗಳದ ಸಹಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ವೈದ್ಯರು ನಡೆಸಿದ ತಪಾಸಣೆಯಲ್ಲಿ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದುಬಂದಿತ್ತು. ಇದರಿಂದ ಅನಶ್ವರಳನ್ನು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ತಲುಪಿಸಿ ಸಮಗ್ರ ತಪಾಸಣೆ ನಡೆಸಿದಾಗ ವಿಷ ಹೊಟ್ಟೆಗೆ ಸೇರಿರುವುದು ಪತ್ತೆಯಾಗಿದೆ. ಚಿಕಿತ್ಸೆ ಮುಂದುವರಿಯುತ್ತಿದ್ದಂತೆ ನಿನ್ನೆ ರಾತ್ರಿ  ಈಕೆ ಮೃತಪಟ್ಟಳು.  ಅನಶ್ವರಳ ಸಾವಿಗೆ ಸಂಬಂಧಿಸಿ ತಂದೆ ನೀಡಿದ ದೂರಿನಂತೆ ಬೇಡಗಂ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತಳು ತಂದೆ, ತಾಯಿ ಅನಸೂಯ, ಸಹೋದರ ಅಶ್ವಿನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಅನಶ್ವರ ಡಿವೈಎಫ್‌ಐ ತೋರೋತ್ತ್ ಯೂನಿಟ್ ಕಾರ್ಯಕಾರಿ ಸದಸ್ಯೆಯಾಗಿದ್ದಳು.

RELATED NEWS

You cannot copy contents of this page