ಮುಸ್ಲಿಂ ಲೀಗ್ ಮುಖಂಡ ನಿಧನ

ಕಾಸರಗೋಡು: ಮುಸ್ಲಿಂ ಲೀಗ್ ಮುಖಂಡ ಹಾಗೂ ದೀರ್ಘ ಕಾಲ ಎಸ್‌ಟಿಯು ಜಿಲ್ಲಾಧ್ಯಕ್ಷರಾಗಿದ್ದ ಅಣಂಗೂರು ಬೆದಿರ ನಿವಾಸಿ ಇ. ಅಬ್ದುಲ್ ರಹಿಮಾನ್ ಕುಂಞಿ ಮಾಸ್ತರ್ (86) ನಿಧನ ಹೊಂದಿ ದರು.  ಕೊಲ್ಲಂ ನಿವಾಸಿಯಾದ ಅಬ್ದುಲ್ ರಹಿಮಾನ್ ಅಧ್ಯಾಪಕರಾಗಿ ಕಾಸರಗೋಡಿಗೆ ತಲುಪಿದ್ದರು. ಅಧ್ಯಾಪನದ ಜೊತೆಗೆ ಸಾಮಾಜಿಕ- ರಾಜಕೀಯ ರಂಗಗಳಲ್ಲೂ ಸಕ್ರಿಯರಾದರು. ಮುಸ್ಲಿಂ ಲೀಗ್ ಕಾಸರಗೋಡು ಮಂಡಲ ಪ್ರಧಾನ ಕಾರ್ಯದರ್ಶಿ, ಕಾಸರಗೋಡು ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ದುಡಿದಿದ್ದರು.

You cannot copy contents of this page