ಹೆಣ್ಮಕ್ಕಳ ಚಿತ್ರ ಮೋರ್ಫ್ ಮಾಡಿ ಅಶ್ಲೀಲ ಸೈಟ್‌ಗಳಲ್ಲಿ ಪ್ರಚಾರ: ಎಂಬಿಬಿಎಸ್ ವಿದ್ಯಾರ್ಥಿ ಸೆರೆ

ತಿರುವನಂತಪುರ: ಹೆಣ್ಮಕ್ಕಳ ಚಿತ್ರವನ್ನು ಮೋರ್ಫ್ ಮಾಡಿ ಪ್ರಚಾರಪಡಿಸಿದ ಎಂಬಿಬಿಎಸ್ ವಿದ್ಯಾರ್ಥಿ ಸೆರೆಯಾಗಿದ್ದಾನೆ. ತಿರುವನಂತಪುರ ಮೆಡಿಕಲ್ ಕಾಲೇಜಿನ ತೃತೀಯ ವರ್ಷ ವಿದ್ಯಾರ್ಥಿ ಹಾಗೂ ವಯನಾಡ್ ಕಾಕವಯಲ್ ನಿವಾಸಿಯಾದ ಏಬಲ್ ಸೆರೆಯಾದ ವಿದ್ಯಾರ್ಥಿ. 13ರಷ್ಟು ಸೀನಿಯರ್ ವಿದ್ಯಾರ್ಥಿಗಳ ಚಿತ್ರಗಳನ್ನು ಈತ ಮೋರ್ಫ್ ಮಾಡಿ ಸಾಮಾಜಿಕ ಜಾಲತಾಣಗಳ ಅಶ್ಲೀಲ ಸೈಟ್‌ಗಳಲ್ಲಿ ಪ್ರಚಾರಪಡಿಸಿದ್ದನೆಂದು ವಿದ್ಯಾರ್ಥಿನಿಯರು ದೂರಿದ್ದರು. ಇತ್ತೀಚೆಗೆ ಕೆಲವು ದೃಶ್ಯಗಳು ವಿದ್ಯಾರ್ಥಿನಿಯರ ಗಮನಕ್ಕೆ ಬಂದಿತ್ತು. ಬಳಿಕ ಪರಿಶೀಲಿಸಿದಾಗ ಇನ್ನಷ್ಟು ಹೆಣ್ಣುಮಕ್ಕಳ ಚಿತ್ರಗಳನ್ನು ಈ ರೀತಿ ಪ್ರಚಾರ ಪಡಿಸಿರುವುದಾಗಿ ಪತ್ತೆಹಚ್ಚಲಾಗಿತ್ತು. ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಈತನ ಬಗ್ಗೆ ದೂರು ನೀಡಿಯೂ ಪೊಲೀಸರು ಕೇಸು ದಾಖಲಿಸಲಿಲ್ಲ ವೆಂದು ಆರೋಪಿಸಿ ವಿದ್ಯಾರ್ಥಿಗಳು ಮೆಡಿಕಲ್ ಕಾಲೇಜು ಪೊಲೀಸ್ ಸ್ಟೇಷನ್ ಮುಂಭಾಗ ಪ್ರತಿಭಟಿಸಿದ್ದರು. ಈ ಮಧ್ಯೆ ಪೊಲೀಸರು ಹಾಗೂ ಎಸ್‌ಎಫ್‌ಐ ವಿದ್ಯಾರ್ಥಿಗಳ ಮಧ್ಯೆ ವಾಗ್ವಾದ, ಹೊಕೈ ನಡೆದಿದ್ದು, ಆ ಬಳಿಕ ಆತನನ್ನು ಸೆರೆ ಹಿಡಿಯಲಾಗಿದೆ.

RELATED NEWS

You cannot copy contents of this page