ರಾಹುಲ್‌ಗಾಂಧಿ ಬಂಧನ: ಪೈವಳಿಕೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ಪೈವಳಿಕೆ: ನವದೆಹಲಿಯಲ್ಲಿ ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ಮುಷ್ಕರ ನಿರತರಾದ ವಿದ್ಯಾರ್ಥಿಗಳ ಮೇಲೆ ಕೇಂದ್ರ ಸರಕಾರ ಪೊಲೀಸ್‌ರನ್ನು ಉಪಯೋಗಿಸಿ ನಡೆಸಿದ ಹಲ್ಲೆಯನ್ನು ಪ್ರತಿಭಟಿಸಿದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ , ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಗಾಂಧಿ, ಕೆ.ಸಿ. ವೇಣುಗೋಪಾಲ್ ಮೊದಲಾದವರ ಬಂಧನವನ್ನು ಪ್ರತಿಭಟಿಸಿ ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿಯ ವತಿಯಿಂದ ಪೈವಳಿಕೆಯಲ್ಲಿ ಪ್ರತಿಭಟನಾ ಜಾಥ ಹಾಗೂ ಧರಣಿ ನಡೆಸಲಾಯಿತು. ಮಂಡಲ ಅಧ್ಯಕ್ಷ ವಸಂತ ಕುಮಾರ್ ಉದ್ಘಾಟಿಸಿದರು.

ಪೈವಳಿಕೆ ಪಂಚಾಯತ್ ಉಪಾಧ್ಯಕ್ಷ ರಾಘವೇಂದ್ರ ಭಟ್, ಸ್ಥಾಯೀ ಸಮಿತಿ ಅಧ್ಯಕ್ಷ ಶ್ರೀನಿವಾಸ ಮಾಸ್ತರ್, ಬ್ಲೋಕ್ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣ ಏದಾರ್, ಬ್ಲೋಕ್ ಕಾರ್ಯದರ್ಶಿ ಸಚ್ಚಿದಾನಂದ ರೈ ಮಾತನಾಡಿದರು. ಮಂಡಲ ಕಾರ್ಯದರ್ಶಿ ಜೀವನ್ ಕ್ರಾಸ್ತ ಸ್ವಾಗತಿಸಿ, ಉಪಾಧ್ಯಕ್ಷ ಶಾಜಿ ಎನ್.ಸಿ. ವಂದಿಸಿದರು. ಮಂಡಲ ನಾಯಕರಾದ ಶಿವರಾಮ ಶೆಟ್ಟಿ, ನೌಶಾದ್ ಪಟ್ಲ, ಗಂಗಾಧರ ನಾಯಕ್, ಡಿ.ಕೆ.ಟಿ.ಎಫ್. ಮಂಡಲ ಅಧ್ಯಕ್ಷ ಮೊಹಮ್ಮದ್ ಅಲಿ ಸುಬ್ಬಯಕಟ್ಟೆ, ಐಎನ್‌ಟಿಯುಸಿ ಮಂಡಲ ಅಧ್ಯಕ್ಷ ಚಂದ್ರ ಬಾಯಾರು ನೇತೃತ್ವ ವಹಿಸಿದ್ದರು. ಶಬೀರ್, ಎಡ್ವರ್ಡ್, ಸಿಬಿ ಕಯ್ಯಾರು, ಜೋನ್ ಡಿಸೋಜ, ಉಮೇಶ ಮುಳಿಗದ್ದೆ, ರಾಸಿಕ್ ಪೈವಳಿಕೆ, ರಸಾಕ್ ಚೇರಾಲು, ಭಾಗವಹಿಸಿದರು.

You cannot copy contents of this page