ಮಂಜೇಶ್ವರ: ಬಿಎಂಎಸ್ ಮಂಜೇಶ್ವರ ವಲಯ ಸಮಿತಿಯ ನೇತೃತ್ವದಲ್ಲಿ ವಲಯ ಸಮ್ಮೇಳನ ಹೊಸಂಗಡಿ ಯೂನಿಟ್ ಸಭಾಂ ಗಣದಲ್ಲಿ ಜರಗಿತು. ವಲಯಾಧ್ಯಕ್ಷ ರವಿ ಎಂ.ಕೆ. ಕೋಳ್ಯೂರುರವರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನವನ್ನು ಬಿಎಂಎಸ್ ಜಿಲ್ಲಾಧ್ಯಕ್ಷ ಉಪೇಂದ್ರನ್ ಕೋಟೆಕಣಿ ಉದ್ಘಾಟಿಸಿ ಮಾತನಾಡಿ, ನೀಟ್ ಪರೀಕ್ಷಾ ಪೇಪರ್ ಸೋರಿಕೆ ಹಾಗೂ ಅದಕ್ಕೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಇದೇ ವೇಳೆ ಪರೀಕ್ಷಾ ಸೋರಿಕೆಯ ನೆಪದಲ್ಲಿ ಪಾರ್ಲಿಮೆಂಟ್ ಸೇರಿದಂತೆ ವಿವಿಧೆಡೆ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಈ ವಿಷಯವನ್ನು ಮುಂದಿಟ್ಟುಕೊAಡು ದೇಶವನ್ನು ಅಸ್ಥಿರಗೊಳಿಸಲು, ಇಬ್ಬಾಗ ಮಾಡಲು ಹಾಗೂ ದೇಶದ್ರೋಹಿ ಶಕ್ತಿಗಳು ಭಾರತದೊಳಗೆ ನುಸುಳಿ ದೊಡ್ಡ ಮಟ್ಟದಲ್ಲಿ ದೇಶಕ್ಕೆ ಆಘಾತ ತಂದೊಡ್ಡುವ ಸಂಚು ಇದರ ಹಿಂದೆ ನಡೆಯುತ್ತಿದೆ ಎಂದು ಅವರು ಎಚ್ಚರಿಸಿದರು. ಪರೀಕ್ಷಾ ಪೇಪರ್ ಸೋರಿಕೆ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಎಷ್ಟು ಮುಖ್ಯವೋ, ಅದೇ ರೀತಿ ಈ ದುರ್ಘ ಟನೆಯ ನೆಪದಲ್ಲಿ ಭಾರತಕ್ಕೆ ತೊಂದರೆ ಉಂಟುಮಾಡುವ ಇಂತಹ ದೇಶ ವಿರೋಧಿ ಪ್ರತಿಭಟನೆಗಳು ಹಾಗೂ ಕುಕೃತ್ಯಗಳ ವಿರುದ್ಧ ಎಲ್ಲರೂ ಎಚ್ಚೆತ್ತು ಕೊಂಡು ಪ್ರತಿರೋಧ ವ್ಯಕ್ತಪಡಿಸ ಬೇಕೆಂದು ಅವರು ನುಡಿದರು.
ಸಮಾರೋಪ ಸಮಾರಂಭದಲ್ಲಿ ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ಅನಿಲ್ ಬಿ. ನಾಯರ್, ದಿನೇಶ್ ಬಂಬ್ರಾಣ, ಹರೀಶ್ ಕುದ್ರೆಪಾಡಿ, ಯಶವಂತಿ ಬೆಜ್ಜ ಮಾತನಾಡಿದರು.
ಮಂಜೇಶ್ವರ ವಲಯದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾ ಯಿತು. ಅಧ್ಯಕ್ಷ- ರವಿ ಎಂ.ಕೆ. ಕೋಳ್ಯೂರು, ಉಪಾಧ್ಯಕ್ಷರು- ಭಾಸ್ಕರ ಬಿ.ಎಂ., ಶ್ರೀಧರ ಪಿ., ವನಿತಾ ಜೆ. ನಾಯ್ಕ್, ಜಯಲಕ್ಷ್ಮಿ ಚಿಗುರುಪಾದೆ, ಕಾರ್ಯದರ್ಶಿ- ಕಿಶೋರ್ ಕುಂಜ ತ್ತೂರ್, ಜೊತೆ ಕಾರ್ಯದರ್ಶಿಗಳು- ರಾಮಚಂದ್ರ ಬಟ್ಟಿಪದವ್, ಸುನಿಲ್ ಬಟ್ಟಕಳ, ಪ್ರಫುಲ್ಲ ಕಳಿಯೂರು, ಪ್ರಕಾಶ್ ಹೊಸಂಗಡಿ, ಕೋಶಾಧಿ ಕಾರಿ- ಮನೋಜ್ ಬಟ್ಟಿಪದವ್, ಸಮಿತಿ ಸದಸ್ಯರು- ರವಿ ಮಜಲ್, ರವೀಂದ್ರ ಕುಲಾಲ್, ರೋಹಿತ್ ಬೆಜ್ಜ, ಗೋಪಾಲ ದೈಗೋಳಿ, ಬಾಲಕೃಷ್ಣ ಉಜಿರೆ, ಪ್ರದೀಪ್ ತಲಪ್ಪಾಡಿ, ಹರೀಶ್ ದೈಗೋಳಿ ಮತ್ತು ನಳಿನಿ ಹೊಸಂಗಡಿ ಆಯ್ಕೆಯಾದರು. ರವೀಂದ್ರ ಕುಲಾಲ್ ಸ್ವಾಗತಿಸಿ, ಮನೋಜ್ ಬಟ್ಟಿಪದವ್ ವಂದಿಸಿದರು.







