ಕುಂಬಳೆ: ಕುಂಬಳೆಯ ವಿವಿಧ ಘಟಕಗಳಲ್ಲಿ ಬಿಎಂಎಸ್ ಸ್ಥಾಪಕ ದಿನಾಚರಣೆ ಕಾರ್ಯಕ್ರಮ ಜರಗಿತು. ನಾಯ್ಕಾಪು ಶಾಸ್ತಾ ಆಟೋ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಲೋಹಿತಾಕ್ಷ ಧ್ವಜಾ ರೋಹಣ ಗೈದರು. ಬಿಎಂಎಸ್ ನಿರ್ಮಾಣ ಸಮಿತಿ ಜಿಲ್ಲಾ ಕೋಶಾಧಿ ಕಾರಿ ಐತ್ತಪ್ಪ ನಾರಾಯಣಮಂಗಲ ಮಾಹಿತಿ ನೀಡಿದರು. ಸಾಮಾಜಿಕ ಮುಂದಾಳು ಮುರಳೀಧರ ಯಾದವ್ ಶುಭ ಹಾರೈಸಿದರು. ಭಾಸ್ಕರ ಎನ್. ಸ್ವಾಗತಿಸಿ, ಲಕ್ಷ್ಮಣ ಒ. ವಂದಿಸಿದರು. ಬಿಎಂಎಲ್ ಟೈಲರ್ ಸಮಿತಿ ಕುಂಬಳೆ ಘಟಕದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ನಾಗವೇಣಿ ದಿನೇಶ್ ಧ್ವಜಾರೋಹಣ ಗೈದರು. ನಾರಾಯಣಮಂಗಲ, ಮಾವಿನಕಟ್ಟೆ, ಹೇರೂರು, ಮೊದಲಾದ ಕಡೆಗಳಲ್ಲಿ ಬಿಎಂಎಸ್ ಸ್ಥಾಪನಾ ದಿನಾಚರಿಸ ಲಾಯಿತು.
ಬಾಯಾರುಪದವಿನಲ್ಲಿ ಆಟೋ ರಿಕ್ಷಾ ಚಾಲಕರ ಸಂಘದ ವತಿಯಿಂದ ಜರಗಿದ ಕಾರ್ಯಕ್ರಮದಲ್ಲಿ ಯೂನಿಟ್ ಅಧ್ಯಕ್ಷ ಅಶೋಕ ಆವಳ ಕಲ್ಲಡ್ಕ ಅಧ್ಯಕ್ಷತೆ ವಹಿಸಿದ್ದು, ಕಾರ್ಯದರ್ಶಿ ಸಂತೋಷ್ ಬಲ್ಲಾಳ್ ಚಿಪ್ಪಾರು, ದೇವಿಪ್ರಸಾದ್ ರೈ, ಆಟೋ ಚಾಲಕರು ಉಪಸ್ಥಿತರಿದ್ದರು.
ಬಿಎಂಎಸ್ ನಾರಂಪಾಡಿ ಘಟಕದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಘಟಕ ಅಧ್ಯಕ್ಷ ಗಿರೀಶ್ ಮುಂಡೋಳುಮೂಲೆ ಅಧ್ಯಕ್ಷತೆ ವಹಿಸಿದ್ದು, ಸತ್ಯನಾರಾಯಣ ಭಟ್ ಧ್ವಜಾರೋಹಣಗೈದರು. ಪ್ರಕಾಶ್ ಪಾವೂರು, ಹರೀಶ್ ನಾರಂಪಾಡಿ, ಉದಯ ನೆಲ್ಯಡ್ಕ, ವಸಂತ ಬೆಳ್ಳಿಗೆ, ಹರೀಶ್ ಮುಂಡೋಳುಮೂಲೆ, ಸುರೇಶ್ ಮುಂಡೋಳುಮೂಲೆ ಮಾತನಾಡಿದರು.







